Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮೆಝೋನ್ ನಿಂದ ಕನ್ನಡಕ್ಕೆ ಅವಮಾನ: ಕಾನೂನು ಕ್ರಮಕ್ಕೆ ಮುಂದಾದ ಸರ್ಕಾರ

ಅಮೆಝೋನ್ ನಿಂದ ಕನ್ನಡಕ್ಕೆ ಅವಮಾನ: ಕಾನೂನು ಕ್ರಮಕ್ಕೆ ಮುಂದಾದ ಸರ್ಕಾರ
ಬೆಂಗಳೂರು , ಭಾನುವಾರ, 6 ಜೂನ್ 2021 (09:25 IST)
ಬೆಂಗಳೂರು: ಮೊನ್ನೆಯಷ್ಟೇ ಗೂಗಲ್‍ ಕನ್ನಡ ಭಾಷೆಗೆ ಅವಮಾನ ಮಾಡಿ ಕೊನೆಗೆ ಕ್ಷಮೆ ಕೇಳಿತ್ತು. ಇದೀಗ ಅಮೆಝೋನ್ ಕೆನಡಾ ಸಂಸ್ಥೆ ಕನ್ನಡ ಧ್ವಜಕ್ಕೆ ಅವಮಾನ ಮಾಡಿದೆ.


ಮಹಿಳೆಯರ ಒಳ ಉಡುಪುಗಳ ಮೇಲೆ ಕನ್ನಡ ಧ್ವಜದ ಬಣ್ಣ, ರಾಜ್ಯ ಸರ್ಕಾರದ ಲಾಂಛನ ಬಳಸಿ ಕನ್ನಡಿಗರಿಗೆ ಅವಮಾನ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸಂಸ್ಥೆ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಮ್ಮ ಪರಂಪರೆಗೆ, ಸಂಸ್ಕೃತಿಗೆ ಶ್ರೇಷ್ಠ ಇತಿಹಾಸವಿದೆ. ಅದಕ್ಕೆ ಅವಮಾನ ಮಾಡಿರುವುದು ಖಂಡನೀಯ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿಣಿ ಸಿಂಧೂರಿ-ಶಿಲ್ಪಾ ನಾಗ್ ಗೆ ಎತ್ತಂಗಡಿ ಶಿಕ್ಷೆ