Publish Date: Sat, 16 Feb 2019 (10:19 IST)
Updated Date: Sat, 16 Feb 2019 (10:25 IST)
ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಗೆ ಅವಕಾಶ ನೀಡಬೇಕು. ಹೀಗಂತ ಕೇಂದ್ರ ಸರಕಾರಕ್ಕೆ ಯೋಧನೊಬ್ಬ ಮನವಿ
ಮಾಡಿಕೊಂಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಗೆ ಕೇಂದ್ರ ಸರಕಾರ ಆದೇಶ ನೀಡುವಂತೆ ಮನವಿ ಮಾಡಲಾಗಿದೆ. ಫೇಸ್ ಬುಕ್ ನಲ್ಲಿ ಯೋಧನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಪಾಕಿಸ್ತಾನದ ಹೀನ ಕೃತ್ಯಕ್ಕೆ ನಮ್ಮ ಯೋಧರು ಹುತಾತ್ಮರಾಗಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಗೆ ಅವಕಾಶ ನೀಡಿದರೆ ಪಾಕಿಸ್ತಾನಕ್ಕೆ ನುಗ್ಗಿ ಶತ್ರುಗಳ ರುಂಡ ಚೆಂಡಾಡೋದಾಗಿ ವೀರಯೋಧ ತಿಳಿಸಿದ್ದಾರೆ.