Publish Date: Thu, 18 Aug 2022 (19:17 IST)
Updated Date: Thu, 18 Aug 2022 (19:25 IST)
ರಾಜ್ಯಾದ್ಯಂತ ಸಿಎಂ ಬೊಮ್ಮಯಿ ನೇತೃತ್ವದಲ್ಲಿ 50 ಅಸೆಂಬ್ಲಿ ಕ್ಷೇತ್ರಗಳ ಪ್ರವಾಸ ಮಾಡಲಾಗುತ್ತೆ ಎಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ವಕ್ತಾರ ಎಂಜಿ ಮಹೇಶ್ ಮಾಹಿತಿ ನೀಡಿದ್ರು.
ಇನ್ನೂ ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಮಾಹಿತಿ ನೀಡಿದ ರಾಜ್ಯ ಬಿಜೆಪಿ ವಕ್ತಾರ ಮಹೇಶ್, ಸೆಪ್ಟೆಂಬರ್ ಮೊದಲ ವಾರದಿಂದ ಆಕ್ಟೋಬರ್ ಮದ್ಯದವರೆಗೆ ಕರ್ನಾಟಕದ 7 ಕಡೆ ಸಮಾವೇಶಗಳು ನಡೆಸಲು ತೀರ್ಮಾನ ಮಾಡಲಾಗಿದೆ.ದೊಡ್ಡಬಳ್ಳಾಪುರದಲ್ಲಿ ಜನೋತ್ಸವದ ಬಳಿಕ ಆರು ರೆವೆನ್ಯು ಜಿಲ್ಲೆಗಳಲ್ಲಿ ಸಮಾವೇಶ ಮಾಡಲಾಗುತ್ತದೆ.ಕರ್ನಾಟಕದಲ್ಲಿ ಒಟ್ಟು 7 ಕಡೆ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ.ಮುಂದಿನ ರಾಜ್ಯ ಕಾರ್ಯಕಾರಿಣಿ ಸಭೆಯನ್ನ ಸೆಪ್ಟೆಂಬರ್ 10 ಮತ್ತು 11 ರಂದು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು.145 ಕ್ಕೂ ಹೆಚ್ಚು ಸೀಟು ಗೆಲ್ಲುವುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.ಪ್ರಧಾನಿ ಮೋದಿ ಪಂಚ ಸೂತ್ರ ಗಳ ಬಗ್ಗೆ ಇಡೀ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿ ವಿಸ್ತಾರ ಮಾಡಬೇಕು.ಕಾರ್ಯಕರ್ತರು ತಿಂಗಳಲ್ಲಿ 15 ದಿನ ಸಮಯ ಪ್ರವಾಸ ಮಾಡುವಂತೆ ಟಾಸ್ಕ್ ಕೊಡಲಾಗಿದೆ. ಹೀಗಾಗಿ ಒಂದು ಪಂಚಾಯಿತಿ ಒಂದು ಭೂತಿನ 50 % ಓಟು ಪಡೆದುಕೊಳ್ಳಲಾಗುತ್ತದೆ ಎಂದು ಬಿಜೆಪಿ ವಕ್ತಾರ ಎಂಜಿ ಮಹೇಶ್ ಮಾಹಿತಿ ನೀಡಿದ್ರು.