ಕೇಂದ್ರ ಬಜೆಟ್ ಮಂಡನೆ ಆದ ಬಳಿಕ ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷದವರು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಕೇಂದ್ರದ ಬಜೆಟ್ಅನ್ನು ವಿಪಕ್ಷದವರು ತೀವ್ರವಾಗಿ ಟೀಕಿಸಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನ ಸಮರ್ಥನೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.......ಭಾರತದ ಆರ್ಥಿಕ ಸ್ಥಿತಿ ವಿಶ್ವದ ಇತರ ಪ್ರಗತಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಮುಂದುವರೆಯುತ್ತಿದೆ. ಬಹಳ ದೇಶಗಳಲ್ಲಿ ಆರ್ಥಿಕ ಸಂಕಷ್ಟವಿದೆ. ನಮ್ಮ ದೇಶದ ಆರ್ಥಿಕತೆ ಗಟ್ಟಿ ಅಡಿಪಾಯದ ಮೇಲಿದೆ. ಪ್ರಧಾನಿಯವರು ಮೂಲಭೂತ ಸುಧಾರಣೆ ತಂದಿದ್ದಾರೆ. ಹಾಗಾಗಿ, ನಮ್ಮ ಜಿಡಿಪಿ ಆರೋಗ್ಯಪೂರ್ಣವಾಗಿದೆ. ಬಜೆಟ್ನ ಪ್ರಮುಖ ಅಂಶ, ದೇಶದ ಆರ್ಥಿಕ ವೃದ್ಧಿಗೆ ಇನ್ನಷ್ಟು ಬಲ ನೀಡುತ್ತದೆ ಎಂದು ಹೇಳಿದ್ರು.