Publish Date: Fri, 22 Sep 2023 (16:05 IST)
Updated Date: Fri, 22 Sep 2023 (16:10 IST)
ತಮಿಳುನಾಡು ಸಿಎಂ M.K.ಸ್ಟಾಲಿನ್ ಜೊತೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಅವರು ಸ್ಟಾಲಿನ್ ವಿರುದ್ಧ ಒಂದೇ ಒಂದು ಹೇಳಿಕೆ ಕೊಡ್ತಾ ಇಲ್ಲ ಎಂದು ಬಿಜೆಪಿ ಶಾಸಕ R.ಅಶೋಕ್ ಆರೋಪಿಸಿದ್ದಾರೆ.. ಬೆಂಗಳೂರಲ್ಲಿ ಮಾತನಾಡಿದ ಅವರು, ಸಚಿವರು ಇಲ್ಲೇ ಗೂಟ ಹೊಡೆದು ಕುಳಿತಿದ್ದಾರೆ. ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ತಾ ಇದೆ.. ಆದರೆ ಕಾಟಾಚಾರಕ್ಕೆ ಸಂಸದರ ಸಭೆ ಮಾಡಿದ್ದಾರೆ.. ವಿಪಕ್ಷಗಳು ಬೈತಾರೆ ಎಂದು ಸಭೆ ಮಾಡಿದ್ದಾರೆ ಎಂದು ಆರೋಪಿಸಿದ್ರು.. ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅಪೀಲ್ ಮಾಡಿದ ಮೇಲೆ ನಮ್ಮ ರಾಜ್ಯ ಸರ್ಕಾರ ಅಪೀಲ್ ಹೋಗಿದೆ.. ಮೊದಲೇ ಅಪೀಲು ಹೋಗಲು ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ.