ಬೇಸಿಗೆ ಬಂದರೆ ಸಾಕು ಅಯ್ಯೋ ಸೆಖೆ. ತಾಳಲಾರದಷ್ಟು ಬಿಸಿಲು ಎಂದು ಹೊರಗೆ ಹೋದವರು ಹೇಳದ ದಿನ ಇರೋದಿಲ್ಲ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ದೇಹದ ತಾಪಮಾನ ಕಾಯ್ದುಕೊಳ್ಳಲು ಹೀಗೆ ತಪ್ಪದೇ ಮಾಡಿ.
ಪ್ರತಿದಿನ ಬೆಳಿಗ್ಗೆ 1 ಲೋಟ ದಾಳಿಂಬೆ ರಸಕ್ಕೆ 3 ಹನಿ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ದೇಹದ ತಾಪಮಾನ ಸಮತೋಲನದಲ್ಲಿಡಬಹುದು.
ನಿತ್ಯ ಮಲಗುವ ಮೊದಲು 1 ಹಿಡಿ ಗಸಗಸೆ ಜಗಿದು ತಿಂದರೆ ದೇಹದ ತಾಪಮಾನ ಹತೋಟಿಯಲ್ಲಿರುತ್ತದೆ.
1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೇರೆಸಿ ಸೇವಿಸಿದರೆ ದೇಹದ ಉಷ್ಣಾಂಶ ಹೆಚ್ಚಾಗುವುದಿಲ್ಲ.
ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಹಾಗೇ ನಿಮ್ಮ ಪಾದವನ್ನು ನೀರಿನಲ್ಲಿ ಮುಳುಗಿಸಿ ಇಡುವುದರಿಂದಲೂ ದೇಹದ ತಾಪಮಾನ ಕಡಿಮೆಯಾಗುತ್ತದೆ.
ಮೆಂತ್ಯವನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ.