ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ 2014-18ನೇ ಅವಧಿಯಲ್ಲಿ ಕಟ್ಟಿದ್ದ ನಿವೇಶನಗಳಿಗೆ ಅಕ್ರಮ- ಸಕ್ರಮ ಭಾಗ್ಯ ದೊರೆತಿದೆ.ನಗರದಲ್ಲಿಂದು ಬಿಡಿಎ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಸ್ವಾೀಧಿನಕ್ಕೂ ಮುನ್ನ ಮನೆ ಕಟ್ಟಿದ್ದ ನಿವೇಶನದಾರರಿಗೆ ನಾಲ್ಕು ವಾರದಲ್ಲಿ ಸಕ್ರಮ ಪತ್ರ ನೀಡುವಂತೆ ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ ಎಂದರು.
ಡಾ.ಶಿವರಾಮ ಕಾರಂತ ಲೇಔಟ್ ಭೂಸ್ವಾೀಧಿನ ಅಧಿಸೂಚನೆ ಸಂಬಂಧ ಬಿಡಿಎಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಇನ್ನು ಇಲ್ಲಿವರೆಗೆ 6000 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 5700 ಅರ್ಜಿಗಳು ಬಾಕಿ ಇವೆ. ಸದ್ಯ ಮೊದಲ ಹಂತದಲ್ಲಿ 300 ಮನೆಗಳಿಗೆ ಸಕ್ರಮಗೊಳಿಸಲು ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.