Select Your Language

Notifications

webdunia
webdunia
webdunia
webdunia

ಅಖಂಡ ಶ್ರೀನಿವಾಸ್​ಗೆ ‘ಕೈ’ ತಪ್ಪುತ್ತಾ ಟಿಕೆಟ್?

ಅಖಂಡ ಶ್ರೀನಿವಾಸ್​ಗೆ ‘ಕೈ’ ತಪ್ಪುತ್ತಾ ಟಿಕೆಟ್
ಬೆಂಗಳೂರಿನ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೈತಪ್ಪುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಅಖಂಡಗೆ ಟಿಕೆಟ್ ಕೊಡಲು ಕಾಂಗ್ರೆಸ್‌ ಒಂದು ಬಣ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದು ಬಣ ಬೆಂಬಲವಾಗಿ ನಿಂತಿದೆ. ಈ ನಡುವೆ ಪುಲಕೇಶಿ ನಗರಕ್ಕೆ ಮಾಜಿ DCM ಡಾ. G. ಪರಮೇಶ್ವರ್, ಡಾ. H.C. ಮಹದೇವಪ್ಪ ಹೆಸರುಗಳು ಕೂಡಾ ಕೇಳಿಬರುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗಲಭೆ ನಡೆದಿತ್ತು. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿದ್ದು, ನಂತರದಲ್ಲಿ ನಡೆದ ಪೊಲೀಸ್ ಗೊಲಿಬಾರ್‌ಗೆ ಮೂವರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಕಾಂಗ್ರೆಸ್ ಮಾಜಿ ಮೇಯರ್ ಸಂಪತ್ ರಾಜ್ ಬಂಧನವೂ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

‘ಕಾಂಗ್ರೆಸ್​​ SDPI ಬೆಂಬಲ ಕೇಳಿತ್ತು