Publish Date: Sun, 24 Mar 2019 (21:16 IST)
Updated Date: Sun, 24 Mar 2019 (21:17 IST)
ಪ್ರಧಾನಿ ನರೇಂದ್ರ ಮೋದಿಯವರ ಒಟ್ಟು ಸ್ಥಿರಾಸ್ತಿ ಎರಡು ಲಕ್ಷ ಹದಿನಾರು ಸಾವಿರ ಇದ್ದರೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಸ್ತಿ ಲೆಕ್ಕಕ್ಕೆ ಸಿಗೋದಿಲ್ಲ. ಹೀಗಂತ ಶಾಸಕರೊಬ್ಬರು ಟೀಕೆ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೊದಲ ಬಾರಿಗೆ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ನಿಖಿಲ್ ಎಲ್ಲಿದ್ದೀಯಪ್ಪ ಎಂದು ಸಮಾವೇಶದಲ್ಲಿ ಯಲಹಂಕ ಶಾಸಕ ಟೀಕೆ ಮಾಡಿದ್ರು. ಗೌರಿಬಿದನೂರಿನಲ್ಲಿ ನಡೆದ ಬಿಜೆಪಿ ಬೃಹತ್ ಯುವ ಸಮಾವೇಶದಲ್ಲಿ ಈ ಟೀಕೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ನಡೆದಿದ್ದ ಆಂಜನೇಯಸ್ವಾಮಿ ದೇವಸ್ಥಾನ ಹತ್ತಿರ ನಡೆದ ಕಾರ್ಯಕ್ರಮದಲ್ಲಿ
ನನ್ನ ಮೊಬೈಲ್ ನಲ್ಲಿ ಎಲ್ಲಾ ವಿಡಿಯೋವನ್ನು ತೆಗೆಯಬೇಡಿ.
ಕುಮಾರಸ್ವಾಮಿಯವರು ಹೇಳಿದಂತೆ ನಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುತ್ತಾರೆ. ನಿಖಿಲ್ ಎಲ್ಲಿದ್ದೀಯಪ್ಪ? ನೀನು ಈಗಲೇ ಜನರ ಮಧ್ಯೆ ಇದ್ದೀಯಾ? ಅಂತ ಯಲಹಂಕ ಶಾಸಕ ಟೀಕೆ ಮಾಡಿದ್ರು. ಮೋದಿಯವರ ಆಸ್ತಿ ಕೇವಲ ಅವರ ತಾಯಿ, ಬಿಟ್ಟರೆ ಭಾರತ ಮಾತೆ ಎಂದೂ ಅವರು ಹೇಳಿದರು.