Publish Date: Fri, 22 Jul 2022 (20:03 IST)
Updated Date: Fri, 22 Jul 2022 (20:08 IST)
ಮದುವೆಯಿಂದಾಗಿ ಭಾರೀ ಗಮನ ಸೆಳೆದಿದ್ದ ನಯನತಾರ ಇದೀಗ ಮತ್ತೊಂದು ಸುದ್ದಿಯಿಂದ ಚರ್ಚೆಯಲ್ಲಿದ್ದಾರೆ. ಲೇಡಿ ಸೂಪರ್ಸ್ಟಾರ್ ಎಂದೇ ಕರೆಸಿಕೊಂಡಿರುವ ನಯನತಾರ ಮದುವೆ ನಂತರವೂ ಬಹುಬೇಡಿಕೆಯ ನಟಿಯಾಗಿ ಕಾಯ್ದುಕೊಂಡಿದ್ದಾರೆ.
ಮದುವೆ ಬಳಿಕ ಮುಂದಿನ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ನಯನಾ ಈಗಾಗಲೇ ಜವಾನ್ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ತಮ್ಮ ಮುಂದಿನ ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಹಲವು ಟಾಪ್ ನಟಿಯರನ್ನೂ ಹಿಂದಿಕ್ಕಿರುವ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದರು. ಮದುವೆಯಾದ ಬಳಿಕ ಇವರ ಸಂಭಾವನೆ ಇಳಿಯಬಹುದು ಎಂದೇ ಭಾವಿಸಲಾಗಿತ್ತು. ಆದರೆ ಈಗ ಇದು ಹುಸಿಯಾಗಿದೆ.
ಸದ್ಯ ಮುಂಬರುವ ಚಿತ್ರಕ್ಕಾಗಿ ನಯನತಾರ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. ಈ ಹಿಂದೆ 5 ಅಥವಾ 6 ಕೋಟಿ ಪಡೆಯುತ್ತಿದ್ದ ಸಂಭಾವನೆ ಈಗ ದುಪ್ಪಟ್ಟಾಗಿದೆ. ಒಂದು ವೇಳೆ ಈ ಸಂಭಾವನೆ ಪಡೆದಿದ್ದಲ್ಲಿ ನಟಿ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆದ ದಕ್ಷಿಣ ಭಾರತದ ಏಕೈಕ ನಟಿ ಎನಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಸೌತ್ ನಟಿಯರಲ್ಲಿ ಹೆಚ್ಚೆಂದರೆ 5 ಕೋಟಿಯ ತನಕ ಸಂಭಾವನೆಯನ್ನು ಪಡೆಯುವಲ್ಲಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ