ನವದೆಹಲಿ : ಡ್ಯುರೆಕ್ಸ್ ಕಾಂಡಂಮ್ ಕಂಪೆನಿ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಪೋಸ್ಟರ್ ವೊಂದನ್ನು ಹಾಕಿ ಇದೀಗ ವಿವಾದಕ್ಕೆ ಸಿಕ್ಕಿಕೊಂಡಿದೆ.
ಡ್ಯುರೆಕ್ಸ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ, “ಶೇ. 70 ಭಾರತೀಯ ಮಹಿಳೆಯರು ಸೆಕ್ಸ್ ಮಾಡುವ ವೇಳೆ ಪರಾಕಾಷ್ಠೆ ತಲುಪುವುದಿಲ್ಲ” ಎಂದು ಪೋಸ್ಟರ್ ನ್ನು ಹಂಚಿಕೊಂಡಿತ್ತು. ಅಷ್ಟೇ ಅಲ್ಲದೇ ‘ಭಾರತ, ನಾವು ಈ ಬಗ್ಗೆ ಮಾತನಾಡಬೇಕು’ ಎನ್ನುವ ಕ್ಯಾಪ್ಶನ್ ನೀಡಿತ್ತು. ಇದು ಭಾರತೀಯ ಪುರುಷರ ಕೆಂಗಣ್ಣಿಗೆ ಗುರಿಯಾಗಿದ್ದು, #BoycottDurex ಎನ್ನುವ ಹ್ಯಾಶ್ ಟ್ಯಾಗ್ ಹಾಕಿ ಅನೇಕರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇದು ನಮ್ಮ ಸಾಮರ್ಥ್ಯದ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದಂತಿದೆ ಎಂದು ಅನೇಕರು ಬರೆದುಕೊಂಡಿದ್ದರೆ, ಇನ್ನು ಕೆಲವರು ಈ ರೀತಿ ಅವಮಾನ ಮಾಡಿದ ಸಂಸ್ಥೆಯನ್ನು ಭಾರತದಿಂದಲೇ ಹೊರಗಟ್ಟಬೇಕು ಎಂದಿದ್ದಾರೆ. ಡ್ಯುರೆಕ್ಸ್ ಜಾಹೀರಾತು ಅನೇಕ ಮಹಿಳಾ ಮಣಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಅವರು ಕೂಡ ಪುರುಷರ ಬೆಂಬಲಕ್ಕೆ ನಿಂತಿದ್ದು, ಡ್ಯುರೆಕ್ಸ್ ನೀಡಿರುವ ಹೇಳಿಕೆ ಶುದ್ಧ ಸುಳ್ಳು ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಈ ಬಗ್ಗೆ ವಿದೇಶಿಗರು ಟ್ರೋಲ್ ಮಾಡಿದ್ದು, ಸೆಕ್ಸ್ ಮಾಡುವುದನ್ನೇ ಬಿಟ್ಟು ಬಿಡಿ, ಡ್ಯುರೆಕ್ಸ್ ಅನ್ನು ಹೊರಗಟ್ಟಿ’ ಎಂದು ಭಾರತೀಯರನ್ನು ಲೇವಡಿ ಮಾಡಿದ್ದಾರೆ.