ಅಹಮದಾಬಾದ್ : ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಹಮದಾಬಾದ್ ನ ಮಹಿಳೆಯೊಬ್ಬಳು ತನ್ನ ಕಾರನ್ನು ತಂಪಾಗಿಡಲು ಅದಕ್ಕೆ ಸಗಣೆ ಸಾರಿಸಿದ್ದು, ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಹಮದಾಬಾದ್ ನಲ್ಲಿ ಉಷ್ಣಾಂಶವು 45 ಡಿಗ್ರಿಯಷ್ಟಿದ್ದು, ಇದರಿಂದ ತನ್ನ ಕಾರನ್ನು ರಕ್ಷಿಸಲು ಸೆಜಲ್ ಶಾ ಎಂಬವರು ಈ ರೀತಿ ಮಾಡಿದ್ದಾರೆ. ರೂಪೇಶ್ ಗೌರಾಂಗ್ ದಾಸ್ ಎಂಬವರು ಫೇಸ್ ಬುಕ್ ನಲ್ಲಿ ಈ ಫೋಟೊವನ್ನು ಶೇರ್ ಮಾಡಿ, ಸಗಣಿ ಬಳಸಿಕೊಂಡಿರುವ ಅದ್ಭುತ ವಿಧಾನ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಹಲವರಲ್ಲಿ ತುಂಬಾ ಅಚ್ಚರಿ ಉಂಟು ಮಾಡಿದೆ.
ಈ ವಿಧಾನ ನನ್ನ ಕಾರನ್ನು ತಂಪಾಗಿ ಇಡುವುದು ಮಾತ್ರವಲ್ಲದೆ ಮಾಲಿನ್ಯ ತಪ್ಪಿಸುವುದು. ಕಾರಿನಲ್ಲಿ ಏರ್ ಕಂಡೀಷನರ್ ಹಾಕುವ ವೇಳೆ ಕೆಲವೊಂದು ಹಾನಿಕಾರಕ ಗ್ಯಾಸ್ ಬಿಡುಗಡೆ ಆಗುವುದು ಮತ್ತು ಇದು ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾನು ಈಗ ಹೆಚ್ಚಾಗಿ ಎಸಿ ಇಲ್ಲದೆ ಕಾರನ್ನು ಚಲಾಯಿಸುತ್ತೇನೆ ಮತ್ತು ಇದು ಕಾರನ್ನು ತಂಪಾಗಿಡುತ್ತದೆ ಎಂದು ಸೆಜಲ್ ಶಾ ತಿಳಿಸಿದ್ದಾರೆ.