ಅದಾನಿ-ಹಿಂಡೆನ್ ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಸೋಮವಾರದವರೆಗೆ ಎಲ್ಲಾ ಪಕ್ಷಗಳಿಂದ ಲಿಖಿತ ವಾದವನ್ನು ನ್ಯಾಯಾಲಯ ಕೇಳಿದೆ.
ನವೆಂಬರ್ 24 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ನಾವು ಹಿಂಡೆನ್‌ಬರ್ಗ್ ವರದಿಯನ್ನು ವಾಸ್ತವಿಕವಾಗಿ ಸರಿ ಎಂದು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಸೆಬಿಗೆ ತನಿಖೆ ಮಾಡುವಂತೆ ಸೂಚಿಸಿದ್ದಾರೆ ಅಂತಾ ವರದಿಗಳು ಹೇಳಿವೆ.