ಬಾಕಿ ಸಂಬಳ ಕೇಳಲು ಬಂದ ನೌಕರನಿಗೆ ಮಹಿಳಾ ಉದ್ಯಮಿಯೋರ್ವಳು ತನ್ನ ಬೂಟು ನೆಕ್ಕುವಂತೆ ಮಾಡಿದ ಹಾಗೂ ಇತರ ನೌಕರರಿಂದ ಬೆಲ್ಟ್ನಿಂದ ಹೊಡೆಸಿದ ಹೇಯ ಘಟನೆ ಗುಜರಾತ್ನ ಮೊರ್ಬಿಯಲ್ಲಿ ನಡೆದಿದೆ.ನಿಲೇಶ್ ದಾಲ್ಸಾನಿಯಾ ಎಂಬ ವ್ಯಕ್ತಿಯನ್ನು ಕೇವಲ 18 ದಿನಗಳಲ್ಲೇ ವಜಾಗೊಳಿಸಲಾಗಿತ್ತು. ಬಳಿಕ ಆ 18 ದಿನಗಳ ಸಂಬಳ ಕೇಳಲು ಹೋದಾಗ ರಾಣಿಬಾ ಮತ್ತು ಆಕೆಯ ಸಹಾಯಕರು ಹೊಡೆದು ಗಾಯಗೊಳಿಸಿದ್ದು ಪ್ರಕರಣ ದಾಖಲಾಗಿದೆ.