Publish Date: Sat, 03 Nov 2018 (11:09 IST)
Updated Date: Sat, 03 Nov 2018 (11:11 IST)
ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಹಕ್ಕಿ ಪಿಕ್ಕೆಯ ಆಕ್ಷೇಪಾರ್ಹ ಟ್ವೀಟ್ ಮಾಡಿ ಟೀಕೆಗೊಳಗಾಗಿದ್ದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾಗೆ ಬಿಜೆಪಿ ಲೋಕಸಭೆ ಉಪಚುನಾವಣೆ ವಿಚಾರವಾಗಿ ಟಾಂಗ್ ಕೊಟ್ಟಿದೆ.
ರಮ್ಯಾ ತವರು ಮಂಡ್ಯದಲ್ಲಿ ಈ ಬಾರಿ ಉಪಚುನಾವಣೆ ನಡೆಯುತ್ತಿದ್ದು, ಮತದಾನ ಮಾಡಲು ಬರುವಂತೆ ಬಿಜೆಪಿ ವ್ಯಂಗ್ಯ ಮಾಡಿದೆ.
ಅಕ್ಕಾ ರಮ್ಯಾಕ್ಕಾ.. ಬಾರಕ್ಕಾ.. ಓಟ್ ಮಾಡಕ್ಕಾ.. ಎಂದು ಮಂಡ್ಯ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ರಮ್ಯಾಗೆ ಕರೆ ಕೊಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಮ್ಯಾ ಮತದಾನ ಮಾಡದೇ ಟೀಕೆಗೊಳಗಾಗಿದ್ದರು. ಈ ಬಾರಿಯೂ ಅವರು ಮತಗಟ್ಟೆಗೆ ಬರುವುದು ಡೌಟು. ಹೀಗಾಗಿ ಬಿಜೆಪಿ ರಮ್ಯಾಗೆ ಟಾಂಗ್ ಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.