Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಮತದಾನ ಭಾರತೀಯನ ಮೂಲಭೂತ ಹಕ್ಕು’ ಎಂದು ತಿಳಿಸಿದ ನಟ ವಿಜಯ್

'ಮತದಾನ ಭಾರತೀಯನ ಮೂಲಭೂತ ಹಕ್ಕು’ ಎಂದು ತಿಳಿಸಿದ ನಟ ವಿಜಯ್
ಬೆಂಗಳೂರು , ಬುಧವಾರ, 9 ಮೇ 2018 (14:48 IST)
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕೆಲವು ಸಿನಿಮಾ ತಾರೆಯರು ರಾಜಕೀಯ ನಾಯಕರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಮತದಾನದ ಬಗ್ಗೆ ತಮ್ಮ ಅಭಿಮಾನಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.


ಇದೀಗ ನಟ ದುನಿಯಾ ವಿಜಯ್ ಅವರು ಕೂಡ ಮತದಾನದ ಕುರಿತು ತಮ್ಮ ಅಭಿಮಾನಿಗಳಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 'ಮತದಾನ ಭಾರತೀಯನ ಮೂಲಭೂತ ಹಕ್ಕು. ಆ ಹಕ್ಕನ್ನು ಒಬ್ಬ ಉತ್ತಮ ನಾಯಕನನ್ನು ಹುಟ್ಟು ಹಾಕಲು ಬಳಸಿಕೊಳ್ಳಬೇಕು. ನಾನು ಪ್ರತಿ ಚುನಾವಣೆಯಲ್ಲಿಯೂ ತಪ್ಪದೇ ವೋಟ್ ಮಾಡುತ್ತೇನೆ’ ಎಂದು ಹೇಳಿದ್ದಾರೆ.


ಹಾಗೇ ‘ಈಗಾಗಲೇ ಮತದಾನದ ಜಾಗೃತಿಯ ಕುರಿತಂತೆ ಅನೇಕ ಕಲಾವಿದರು ರಾಜಕಾರಣಿಗಳ ಜೊತೆಗೆ ಸೇರಿ ರ್ಯಾಲಿಯನ್ನು ಮಾಡುತ್ತಿದ್ದಾರೆ. ಅನೇಕ ಕಲಾವಿದರು ಚುನಾವಣೆಗೆ ನಿಂತಿದ್ದಾರೆ. ಯಾರು ಏನೇ ಅಂದರೂ ಮತದಾನ ಮಾಡುವುದನ್ನು ಮರೆಯಬಾರದು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಯಾರಿಗೆ ಮತ ಹಾಕಬೇಕು ಎಂಬ ಗೊಂದಲ ಇದ್ದೇ ಇರುತ್ತದೆ. ಈ ಗೊಂದಲಕ್ಕೆ ನಮ್ಮ ನಾಯಕರೇ ಕಾರಣ. ಎಲ್ಲವನ್ನೂ ಕಲಸುಮೇಲೋಗರ ಮಾಡಿ , ನಿಜವಾದ ನಾಯಕರು ಯಾರು ಎಂಬುದನ್ನು ಗೊತ್ತೇ ಆಗದಂತೆ ಮಾಡಿದ್ದಾರೆ. ಇಂಥವರಿಗೆ ಬುದ್ದಿ ಕಲಿಸಲು ಮತದಾನ ಮಾಡಲೇ ಬೇಕು. ಈಗ ಮತದಾನ ಯಂತ್ರದಲ್ಲಿ ನೋಟಾ ಇದೆ. ನಿಮಗೆ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಬಗ್ಗೆ ನಂಬಿಕೆ ಇಲ್ಲದೇ ಹೋದರೆ ನೋಟಾವನ್ನು ಆಯ್ಕೆ ಮಾಡಿಕೊಳ್ಳಬಹುದು' ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಸಿದ ಬಡ ಜನರಿಗೆ ಆಹಾರ ಬೇಕೇ ಹೊರತು ರಂಗುರಂಗಿನ ಭಾಷಣ ಅಲ್ಲ- ಸೋನಿಯಾ ಗಾಂಧಿ