ಮೂರು ವಾರಗಳ ನಂತರ ಸಾಮಾಜಿಕ ತಾಣಕ್ಕೆ ಮತ್ತೆ ಮರಳಿದ್ದೇನೆ. ಕರ್ನಾಟಕದಲ್ಲಿ, ಭಾರತದಲ್ಲಿ ಮತ್ತು ವಿದೇಶಗಳಿಂದಲೂ ಗಟ್ಟಿ ಕಾರಣವಿರದ ನ್ಯಾಯಾಂಗ ಬಂಧನದ ಸಮಯದಲ್ಲಿ ನನ್ನ ಜೊತೆಗಿದ್ದು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು"
"ಸದ್ಯದ ನನ್ನ ಗಡಿಪಾರಿನ ವರದಿಗಳೆಲ್ಲ ಆಧಾರವಿಲ್ಲದ ಅತಿರೇಕದ ಸುದ್ದಿಗಳು. ಈ ತರದ ಸರ್ಕಾರಿ ಬೆಂಬಲಿತ ದಾಳಿಗಳು ನಮ್ಮ ಸತ್ಯ ಮತ್ತು ಸಮಾನತೆಯ ಪರದ ಧ್ವನಿಗಳು ಹೆಚ್ಚಾಗುತ್ತಿರುವುದನ್ನ ತೋರಿಸುತ್ತದೆ"ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಚೇತನ್ ಅಹಿಂಸಾ ಬರೆದುಕೊಂಡಿದ್ದಾರೆ.
ಚೇತನ್ ಅವರ ಈ ಪೋಸ್ಟಿಗೆ ನೂರಾರು ಕಾಮೆಂಟುಗಳು ಬಂದಿವೆ. "ಅಧಿಕಾರ ಅನ್ನೋದು ನಿಜವಾಗ್ಲೂ ನಿಮ್ಮಂಥವರಿಗೆ ಸಿಗಬೇಕು. ಸಾಮಾನ್ಯ ಜ್ಞಾನ ಇಲ್ಲದವರು, ಕಾಂಜಿ ಪಿಂಜಿಗಳೆಲ್ಲ ಅಧಿಕಾರ ಅನುಭವಿಸುತ್ತಿದ್ದಾರೆ, ನಿಮ್ಮ ಮುಂದೆ ಅವರೆಲ್ಲ ಶೂನ್ಯ ಅಣ್ಣ" ಎಂದು ಅವರ ಅಭಿಮಾನಿಗಳು ಚೇತನ್ ಅವರಿಗೆ ಸ್ವಾಗತ ಕೋರಿದ್ದಾರೆ.
"ನಿನ್ನ ಬಿಡುಗಡೆಗೆ ಬೆಂಬಲಿಸಿದವರಲ್ಲಿ ಬಹುತೇಕರು ಮಹಾತ್ಮ ಗಾಂಧಿ ಯಾವ ಅಭಿಮಾನಿಗಳು. ಇನ್ನಾದರೂ ಗಾಂಧಿಯನ್ನು ನಿಂದಿಸುವ ನಿನ್ನ ಮತಿಗೆಟ್ಟ ಬುದ್ದಿಗೆ ತಿಲಾಂಜಲಿಯಿಟ್ಟು ಮಾನವನಾಗು" ಎನ್ನುವ ಬುದ್ದಿಮಾತುಗಳೂ ಇವರ ಪೋಸ್ಟಿಗೆ ಬಂದಿದೆ.
ಸಾಗರೋತ್ತರ ಭಾರತೀಯ ನಾಗರಿಕ ಪತ್ರ (Overseas Citizenship of India) ಕಾನೂನಿನ ಪ್ರಕಾರ, ಚೇತನ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎನ್ನುವ ವರದಿಯನ್ನು ಬೆಂಗಳೂರು ಪೊಲೀಸರು, ರಾಜ್ಯ ಗೃಹ ಸಚಿವಾಲಯಕ್ಕೆ ನೀಡಿದ್ದಾರೆ. ಈ ಕಾನೂನಿನ ಪ್ರಕಾರ, ಈ ಕಾರ್ಡ್ ಅನ್ನು ಹೊಂದಿರುವವರು ಸ್ಥಳೀಯ ಕಾನೂನು ಉಲ್ಲಂಘನೆ, ಹೋರಾಟ, ಪ್ರತಿಭಟನೆ ನಡೆಸುವಂತಿಲ್ಲ.