Publish Date: Thu, 26 Oct 2023 (19:43 IST)
Updated Date: Thu, 26 Oct 2023 (18:48 IST)
ಶಾಲಾ ಮುಖ್ಯ ಶಿಕ್ಷಕನೊಬ್ಬ ಶಾಲೆಯ ಬಾತ್ರೂಮ್ ತೊಳೆಯಲು ಹೇಳಿ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಹಾಕಿದ ಘಟನೆ ಚಿತ್ರದುರ್ಗ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜೋಡಿ ಚಿಕ್ಕೇನಹಳ್ಳಿ ಸರಕಾರಿ ಶಾಲಾ ಶಿಕ್ಷಕ ರಂಗಸ್ವಾಮಿ ಸಿಂಚನಾ ಎಂಬ ವಿದ್ಯಾರ್ಥಿನಿಗೆ ಆ್ಯಸಿಡ್ ಹಾಕಿದ್ದಾರೆ ಎಂದು ಹೇಳಲಾಗಿದೆ.ಇನ್ನು, ಬಾಲಕಿಯನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.