ಉಡುಪಿಯ ಪೇಜಾವರ ಶ್ರೀಗಳು ಶಿವೈಕ್ಯ ಹೊಂದಿದ್ರು ಎಂದು ಮಾಜಿ ಶಾಸಕರೊಬ್ಬರು ತುಂಬಿದ ಸಭೆಯಲ್ಲಿ ಘೋಷಣೆ ಮಾಡಿದ್ದಲ್ಲದೇ ಶ್ರದ್ಧಾಂಜಲಿ ಸಲ್ಲಿಸಿರೋದು ಇದೀಗ ಟೀಕೆಗೆ ಕಾರಣವಾಗುತ್ತಿದೆ.
ಪೇಜಾವರ ಶ್ರೀಗಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಭಾನುವಾರ ಅವರನ್ನು ಮಠಕ್ಕೆ ಮರಳಿ ಕರೆತರಲಾಗುತ್ತಿದೆ.
ಈ ನಡುವೆ ಪೇಜಾವರ ಶ್ರೀಗಳಿಗೆ ಎರಡು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದ್ದಾರೆ ಮಾಜಿ ಶಾಸಕ ಗೋವಿಂದಪ್ಪ.
ಪೌರತ್ವ ಕಾಯ್ದೆ ವಿರುದ್ಧ ಹೊಸದುರ್ಗ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿದ ಮಾಜಿ ಶಾಸಕರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.