Publish Date: Tue, 30 Apr 2019 (18:34 IST)
Updated Date: Tue, 30 Apr 2019 (18:36 IST)
ನ್ಯಾಯಾಲಯ ಆವರಣದಲ್ಲಿಯೇ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದೆ ಎಸಿಬಿ.
ಎಸಿಬಿ ಅಧಿಕಾರಿಗಳಿಗೆ ಬಲೆಗೆ ಸಿಕ್ಕಿಬಿದಿದ್ದಾರೆ ಪಬ್ಲಿಕ್ ಪ್ರಾಸಿಕ್ಯೂಟರ್. ಕಕ್ಷಿದಾರಿಂದ 20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಪಿಪಿ. ತುಮಕೂರು ಜಿಲ್ಲೆ ತಿಪಟೂರು ನ್ಯಾಯಾಲಯ ಆವರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ.
ಕೆ ಇ ಬಿ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನಡೆದಿದೆ.
ಪ್ರಕರಣ ಸಂಬಂಧಿಸಿದಂತೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 20 ಸಾವಿರ ಅಕೌಂಟ್ ಮೂಲಕ ಪಡೆದಿದ್ದರು.
20 ಸಾವಿರ ಹಣ ನೇರವಾಗಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಪಿಪಿ ಕಚೇರಿಯಲ್ಲೇ ರಾತ್ರಿ 10.30 ರವೆರೆಗೆ ವಿಚಾರಣೆ ನಡೆಸಿದ್ದಾರೆ ಎಸಿಬಿ ಅಧಿಕಾರಿಗಳು. 2015 ರಲ್ಲಿ ವಿದ್ಯುತ್ ಕಂಬ ವೃದ್ಧೆ ಮೇಲೆ ಬಿದ್ದು ಕಾಲು ತುಂಡಾಗಿತ್ತು. ಈ ಪ್ರಕರಣದ ವಕಾಲತ್ತು ವಹಿಸಿದ್ದರು ಪಬ್ಲಿಕ್ ಪ್ರಾಸಿಕ್ಯೂಟರ್. ನೆನ್ನೆ ನ್ಯಾಯಾಲಯದಲ್ಲಿ ಕೇಸ್ ಖುಲಾಸೆಗೊಂಡಿತ್ತು. ಆದರೆ ಎಪಿಪಿ, ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.