Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೆಲ ಜನರು ಏನಾದರೂ ವಿಭಿನ್ನವಾಗಿ ಪ್ರಯತ್ನ ಮಾಡ್ತಿರುತ್ತಾರೆ. ಹೀಗೆ ಮಾಡುವ ಕೆಲವರು ಜನರಿಂದ ಬೇಷ್ ಎನಿಸಿಕೊಂಡರೆ ಕೆಲವರು ಮಾತ್ರ ಸರಿಯಾಗಿ ಬೈಗುಳ ತಿನ್ತಾರೆ. ಇಲ್ಲೋರ್ವ ಯುವಕ ರಸ್ತೆಯ ಮಧ್ಯದಲ್ಲಿ ಮಲಗಿರ್ತಾನೆ. ಇವನಿಗೆ ಏನಾಯಿತು ಎಂದು ಜನರು ಬಂದು ನೋಡ್ತಿರುತ್ತಾರೆ. ಆಗ ಮೇಲೆದ್ದ ಯುವಕರ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಲು ಮುಂದಾಗುತ್ತಾನೆ. ಸುತ್ತಲೂ ಇದ್ದ ಮಂದಿ ಇವನ ಹುಚ್ಚಾಟ ಕಂಡು ನಗುತ್ತಿದ್ದಾರೆ. ಕುಣಿಯುತ್ತಾ. ಕುಣಿಯುತ್ತಾ ಈತ ರಸ್ತೆಯ ಮೇಲೆ ಮಲಗಿಕೊಂಡು ಡ್ಯಾನ್ಸ್ ಮಾಡ್ತಾನೆ. ಸುತ್ತ ಇದ್ದ ಜನ ಇದನ್ನು ಆಶ್ವರ್ಯದಿಂದ ನೋಡ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚೆಚ್ಚು ವೈರಲ್ ಆಗ್ತಿದೆ.