ಬೆಂಗಳೂರು: ಮೊಬೈಲ್ ಟವರ್ಗಳಲ್ಲಿ ಇರುವ ಚಿಪ್ ಕದಿಯುತ್ತಿದ್ದ ಕಳ್ಳನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 25 ಲಕ್ಷ ರೂ. ಮೌಲ್ಯದ 19 ಮೊಬೈಲ್ ಟವರ್ ಚಿಪ್ ವಶಕ್ಕೆ ಪಡೆಯಲಾಗಿದೆ.
ಗಂಗಾಧರ್ ಬಂಧಿತ ಆರೋಪಿ.
ಖಾಸಗಿ ಮೊಬೈಲ್ ಕಂಪೆನಿಯಲ್ಲಿ ಸೈಟ್ ಇಂಜಿನಿಯರ್ ಆಗಿದ್ದ ಗಂಗಾಧರ್ ಕದ್ದ ಚಿಪ್ಗಳನ್ನು ಅಕ್ರಮವಾಗು ಮಾರುತ್ತಿದ್ದ ಎಂದು ತಿಳಿದುಬಂದಿದೆ.
ಗಂಗಾಧರ್ ಮೊಬೈಲ್ ಟವರ್ಗಳಿಗೆ ಹೋಗಿ ಬೆಲೆಬಾಳುವ ಚಿಪ್ ಗಳನ್ನ ಕಳ್ಳತನ ಮಾಡುತಿದ್ದ. ಈ ಬಗ್ಗೆ ಮೊಬೈಲ್ ಕಂಪೆನಿಯವರು ಪೀಣ್ಯ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಟೆಲಿಕಾಂ ಕಂಪನಿಯ ಟವರ್ಗಳ ಮ್ಯಾನೇಜ್ ಕೆಲಸ ನಿರ್ವಹಿಸುವ ಕಂಪನಿಯಲ್ಲಿ ಕೆಲಸಕ್ಕಿದ್ದ ಗಂಗಾಧರ್ ಟವರ್ಗಳ ಸಂಪೂರ್ಣ ಮಾಹಿತಿ ಹೊಂದಿದ್ದ. ಕೆಲಸ ಕಳೆದುಕೊಂಡ ಬಳಿಕ ಹಣವಿಲ್ಲದೇ ಪರದಾಟ ಪಟ್ಟಿದ್ದ. ಬಳಿಕ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಪೀಣ್ಯ, ಕೊಣನಕುಂಟೆ, ಪುಲಕೇಶಿನಗರ ಸೇರಿದಂತೆ ಕನಕಪುರದಲ್ಲೂ ಚಿಪ್ ಕಳ್ಳತನ ಮಾಡಿದ್ದ ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಒಟ್ಟು 9 ಪ್ರಕರಣ ಪತ್ತೆಯಾಗಿದೆ. ಪೀಣ್ಯ ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.