Publish Date: Wednesday, 11 January 2023 (15:56 IST)
Updated Date: Wednesday, 11 January 2023 (15:58 IST)
ನಗರದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಅವಘಡಕ್ಕೆ ಶೆಡ್ ನಲ್ಲಿದ್ದ ಹಲವು ಕುರಿಗಳು ಸಾವನಾಪ್ಪಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಯಿಸಿ ಬೆಂಕಿ ನಂದಿಸಿದ್ದಾರೆ.ಬ್ಯಾಟರಾಯನಪುರ ಬಳಿಯ ಶಾಮಣ್ಣ ಗಾರ್ಡನ್ ನಲ್ಲಿ ಘಟನೆ ನಡೆದಿದ್ದು,ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿ ಅವಘಡ ಕುರಿತು ಪೊಲೀಸರು ಮಾಹಿತಿ ಪಡೆಯುತ್ತಿದ್ದು,ಅಸ್ಲಾಂ ಎಂಬುವವರಿಗೆ ಸೇರಿದ್ದ ಶೆಡ್ ಎಂಬುದುತಿಳಿದು ಬಂದಿದೆ.ಘಟನೆಯಲ್ಲಿ 15 ಕುರಿ, 20 ಕೋಳಿ, ನಾಲ್ಕು ಮೊಲ ಸಾವನಾಪ್ಪಿದೆ.ಸ್ಥಳೀಯರಿಂದ ಎರಡು ಕರು ರಕ್ಷಣೆ ಮಾಡಲಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಈ ಒಂದು ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.