Select Your Language

Notifications

webdunia
webdunia
webdunia
webdunia

ಸಿಬಿಐ ತನಿಖೆಗೆ ತೀವ್ರ ಒತ್ತಾಯ

ರಮೇಶ್ ಜಾರಕಿಹೊಳಿ
ಹುಬ್ಬಳ್ಳಿ : ಸಿಡಿ ಷಡ್ಯಂತ್ರ ಬಗ್ಗೆ ಸಿಬಿಐ ತನಿಖೆಗೆ ತ್ರೀವಾಗಿ ಒತ್ತಾಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಬುಧವಾರ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತೆ ದೆಹಲಿ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ತಮ್ಮ ಆಪ್ತ ಕಿರಣ್ ಜಾಧವ್ ಹಾಗೂ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಜಾರಕಿಹೊಳಿ ಪ್ರಯಾಣ ಬೆಳೆಸಿದ್ದಾರೆ.

ಕಳೆದ ವಾರ ಜಾರಕಿಹೊಳಿ ಅಮಿತ್ ಶಾ ಭೇಟಿಯಾಗಿದ್ದರು ಈ ವೇಳೆ ಬುಧವಾರ ಅಥವಾ ಗುರುವಾರ ತಮಗೆ ಕರೆಯಿಸಿ ಮಾತನಾಡುವೆ ಎಂದು ಶಾ ಭರವಸೆ ನೀಡಿದ್ದರು ಎನ್ನಾಲಾಗಿದೆ. ಅಮಿತ್ ಶಾ ಕರೆಯ ನಿರೀಕ್ಷೆಯಲ್ಲಿ ದೆಹಲಿಗೆ ತೆರಳುತ್ತಿರುವ ರಮೇಶ್ ಜಾರಕಿಹೊಳಿ ಸಾಧ್ಯವಾದರೆ ಗುರುವಾರ ಸಂಜೆ ಮತ್ತೆ ಶಾ ಭೇಟಿ ಮಾಡುವ ಸಾಧ್ಯತೆಯಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 50% ಟ್ರಾಫಿಕ್ ಡಿಸ್ಕೌಂಟ್ ಗೆ ವ್ಯಾಪಕ ಬೆಂಬಲ