Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಸವ ಜಯಂತಿ ವೇಳೆ ಗ್ರಾಮದಲ್ಲಿ ಡಿಜೆ ಹಚ್ಚಿ ಡ್ಯಾನ್ಸ್ ಮಾಡುತ್ತಿದ್ದ ಯುವಕರು ಪೊಲೀಸ್ ಜೀಪ್ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ ನಡೆದಿದೆ. ಬಸವ ಜಯಂತಿ ಹಿನ್ನಲೆಯಲ್ಲಿ ಯುವಕರು ಗ್ರಾಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಸಮಯ 11 ಗಂಟೆ ನಂತರ ಡ್ಯಾನ್ಸ್ ಮಾಡದಂತೆ ಯುವಕರಿಗೆ ಪೊಲೀಸರು ತಿಳಿ ಹೇಳಿದರು. ಇಷ್ಟಕ್ಕೆ ಕೆರಳಿದ ಯುವಕರು ಪೊಲೀಸ್ ಜೀಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಜೀಪ್ ನ ಗ್ಲಾಸ್ ಪುಡಿಯಾಗಿದೆ.