Publish Date: Sun, 08 May 2022 (19:39 IST)
Updated Date: Sun, 08 May 2022 (19:42 IST)
ಶಿವಮೊಗ್ಗದಲ್ಲಿ ಬಿಜೆಪಿ ಮಾಜಿ ಎಂಎಲ್ಸಿ ಭಾನುಪ್ರಕಾಶ್ ಪುತ್ರನಿಗೆ ಸೇರಿದ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ನಗರದ ಊರುಗಡೂರು-ಸೂಳೇಬೈಲ್ ಬಳಿ ಕಾರಿನ ಮೇಲೆ ನಿನ್ನೆ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮತ್ತೂರಿನನಿವಾಸಿಗಳಿಬ್ಬರು ಶಿವಮೊಗ್ಗಕ್ಕೆ ಬಂದು ವಾಪಸ್ ಹೋಗುವಾಗ ಮಾರ್ಗಮಧ್ಯೆ ಬಿಜೆಪಿ ಮಾಜಿ ಎಂಎಲ್ಸಿ ಭಾನುಪ್ರಕಾಶ್ ಪುತ್ರ ಹರಿಕೃಷ್ಣಗೆ ಸೇರಿದ ಕಾರಿನ ಮೇಲೆ ಕಲ್ಲು ತೂರಾಟ ನಡೆದಿತ್ತು..ಕಿಡಿಗೇಡಿಗಳ ಕಲ್ಲು ತೂರಾಟದಿಂದ ಕಾರಿನ ಗ್ಲಾಸ್ ಚೂರು ಚೂರಾಗಿದೆ. ಸ್ಥಳಕ್ಕೆ ಎಸ್ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್, ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್.ದೀಪಕ್ ಸೇರಿದಂತೆ ಪೊಲೀಸರು ತೆರಳಿ, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡ್ರು.