Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಗನಿಂದಲೇ ಮಾನವ ಎಂಬುದು ತಿಳಿದಿರುವ ವಿಷಯ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. ಕೋತಿಗಳು ಎಂದೊಡನೆ ತಕ್ಷಣ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ ಕುಳಿತಲ್ಲಿಯೇ ಏನಾದರೂ ಚೇಷ್ಟೆಯನ್ನು ಹುಡುಕುವ ಮಂಗಗಳ ತಮಾಷೆಯ ಚೇಷ್ಟೆಗಳನ್ನು ನೋಡಿದರೆ ನಗು ಬರುತ್ತದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತನ್ನ ಕ್ಯಾಮೆರಾದಲ್ಲಿ ಕೋತಿಗಳನ್ನು ಸೆರೆಹಿಡಿದಿರುವುದನ್ನು ಕಾಣಬಹುದು. ವೀಡಿಯೊ ಮಾಡಿ ಬಳಿಕ ಅದೇ ವಿಡಿಯೋವನ್ನು ಮಂಗಗಳಿಗೆ ತೋರಿಸಿದ್ದಾರೆ. ಹೌದು, ಯಾರೋ ಒಬ್ಬರು ಒಂದು ಸಣ್ಣ ಮಂಗಗಳ ಹಿಂಡಿಗೆ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ ಆನ್ ಮಾಡಿ ಕೊಟ್ಟಿದ್ದಾರೆ. ಮೊದಲಿಗೆ ಈ ವಿಡಿಯೋ ಫ್ರೇಮಿನಲ್ಲಿ ಮೂರು ಮಂಗಗಳು ವಿಡಿಯೋ ನೋಡುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಮಂಗ ವಿಡಿಯೋ ಕಂಡು ಏನೋ ಅಚ್ಚರಿ ಕಂಡಂತೆ ಉಬ್ಬೇರಿಸಿತು. ಫೋನ್ ಹಿಡಿದಿದ್ದ ವ್ಯಕ್ತಿ ಫೋನ್ ಅನ್ನು ಸ್ವಲ್ಪ ತಿರುಗಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇನ್ನೊಂದು ಮಂಗ ಸ್ಮಾರ್ಟ್‌ಫೋನ್ ಅನ್ನು ತನ್ನೆಡೆ ಕಸಿದು ವಿಡಿಯೋಗೆ ಚುಂಬಿಸಲು ಪ್ರಯತ್ನಿಸಿತು.