Publish Date: Fri, 28 Nov 2025 (14:20 IST)
Updated Date: Fri, 28 Nov 2025 (14:22 IST)
ವಿಜಯಪುರ: ಸಿಗರೇಟ್ ಕಿಡಿಯಿಂದ ಹೊತ್ತಿಕೊಂಡ ಬೆಂಕಿಯಿಂದ ಸಿಲಿಂಡರ್ ಬ್ಲಾಸ್ಟ್ ಆಗಿ 7 ಗೂಡಂಡಿಗಳು ಸುಟ್ಟು ಕರಕಲಾಗಿರುವ ಘಟನೆ ವಿಜಯಪುರದ ಚಾಳುಕ್ಯ ನಗರದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದಿದೆ.
ಹೊತ್ತಿಕ ಉರಿದ ಅಂಗಡಿಗಳಲ್ಲಿ ಟೀ ಕಾಫಿ, ಫುಡ್ ಸ್ಟಾಲ್, ವಡಾಪಾವ್ ಶಾಪ್‌ಗಳು ಭಸ್ಮವಾಗಿದ್ದು, ಗೂಡಂಗಡಿಗಳಲ್ಲಿದ್ದ ಗ್ಯಾಸ್ ಸಿಲೆಂಡರ್‌ಗಳು ಬ್ಲಾಸ್ಟ್ ಆಗಿದೆ.
ಸಿಗರೇಟ್ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಗೂಡಂಗಡಿಗೆ ಹೊತ್ತಿಕೊಂಡಿದೆ. ಇದಾದ ಮೇಲೆ ಪಕ್ಕದ ಮನೆಗೂ ವ್ಯಾಪಿಸಿದೆ. ಬ್ಲಾಸ್ಟ್ ಆದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಮೈಝುಮ್ ಎನ್ನುವಂತಿದೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದನ್ನೂ
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಸ್ಥಳದಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಬೀಡು ಬಿಟ್ಟಿದ್ದು, ಪ್ರಕರಣ ದಾಖಲಾಗಿದೆ.
Sampriya
Publish Date: Fri, 28 Nov 2025 (14:20 IST)
Updated Date: Fri, 28 Nov 2025 (14:22 IST)