ರಾಜ್ಯದಲ್ಲಿ ಒಮಿಕ್ರಾನ್ ಭೀತಿಯ ನಡುವೆ ಹೊಸ ವರ್ಷ ಆಚರಣೆ ನಡೆಸಲು ಎಲ್ಲರು ಸಜ್ಜಾಗುತ್ತಿದ್ದು, ಇದಕೆ ರಾಜ್ಯ ಸರಕಾರ ಬ್ರೇಕ್ ಹಾಕಿದೆ.
ಇಂದು ಸಿಎಂ10 ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಗೊಳಿಸಿದ್ದು, ಇದರಲ್ಲಿ ಕೆಲವು ಗೊಂದಲಗಳಿವೆ ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಹೊಸ ನಿಯಮದಿಂದ ಪಬ್, ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳಲಿದೆ ಎನ್ನುವ ಮಾಲೀಕರ ಮನವಿಗೆ ಪ್ರತಿಕ್ರಿಯಿಸಿರುವ ಸಿಎಂ , ನೈಟ್ ಕರ್ಪ್ಯೂ ಮರುಪರಿಶೀಲನೆ ಇಲ್ಲ ಎಂಬುದಾಗಿ ಹೇಳಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ನೈಟ್ ಕರ್ಪ್ಯೂ ಬಗ್ಗೆ ಮರು ಪರಿಶೀಲನೆ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಒಮಿಕ್ರಾನ್ ಹರಡದಂತೆ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಫೆಬ್ರವರಿಯಲ್ಲಿ ಒಮಿಕ್ರಾನ್ ಜಾಸ್ತಿಯಾಗುತ್ತೆ ಎಂಬುದಕ್ಕೆ ಪುರಾವೆ ಇಲ್ಲ, ಅದಕ್ಕೆ ಪೂರಕವಾದ ದಾಖಲೆ ಇಲ್ಲ, ಸಂಶೋಧನೆಯೂ ನಡೆದಿಲ್ಲ. ಆದಾಗ್ಯೂ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಈ ಹಿನ್ನೆಲೆ ಮಾರ್ಗೂಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ವರ್ಷದ ಸಂಭ್ರಮ ಒಮಿಕ್ರಾನ್ ಹರಡಲು ದಾರಿ ಮಾಡಿಕೊಡದಿರಲಿ ಎಂದು ಡಿ.28ರಿಂದ ಜ.7 ರ ವರೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡುವುದಾಗಿ ಇಂದು ಬೆಳಗ್ಗೆ ಸಿಎಂ ಘೋಷಿಸಿದ್ದಾರೆ.