ಅವರಿಬ್ಬರೂ ಒಂದೆರಡು ವರ್ಷ ಪ್ರೀತಿಯಲ್ಲಿ ಮುಳುಗಿದ್ದರು. ಮನೆ ಮಂದಿ ಆಶೀರ್ವಾದ ಪಡೆದು ಮದುವೆ ಆಗಿದ್ದರು. ಆದರೆ…
ಪ್ರೀತಿಸಿ ಮದುವೆಯಾದ ಯುವಜೋಡಿಯೊಂದು ಮದುವೆಯಾದ ನಂತರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಖಾಸಗಿ ಶಾಲೆ ಶಿಕ್ಷಕ ವಿಶಾಲ್, ಖಾಸಗಿ ಕಂಪನಿ ಉದ್ಯೋಗಿ ಸನಿಶಾ ಸಾವನ್ನಪ್ಪಿದ ಪ್ರೇಮಿಗಳಾಗಿದ್ದಾರೆ.
ಮದುವೆಯಾದ ಮರುದಿನ ವಿಶಾಲ್ ರೈಲು ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಎರಡ್ಮೂರು ದಿನಗಳ ಬಳಿಕ ಪತ್ನಿ ನಿಶಾ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.