ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಸರ್ಕಾರದ ಸಹಾಕರ ಸಚಿವರಾಗಿರುವ ಕೆ.ಎನ್ ರಾಜಣ್ಣ ಮತ್ತು ಪಶುಸಂಗೋಪನೆ ಸಚಿವರಾಗಿರುವ ಕೆ.ವೆಂಕಟೇಶ ರವರ ನೇತೃತ್ವದಲ್ಲಿ ಅಧ್ಯಕ್ಷರ ಸ್ಥಾನ ಫುಲ್ ಫೀಲ್ ಆಗಿದೆ,ಇನ್ನೂ ಕೆ.ಎಂ.ಎಫ್ ಅಂತಹಾ ದೊಡ್ಡ ಸಂಸ್ಥೆಗೆ ರಾಜ್ಯದ ಎಲ್ಲಾ ಹಾಲು ಒಕ್ಕೂಟದ ನಿರ್ದೇಶಕರಿಂದ ಅವಿರೋಧ ಅಯ್ಕೆ ಯಾಗಿ ವಿಜಯನಗರ ಜಿಲ್ಲೆಯ ಹಗರಿಬೋಮ್ಮನಹಳ್ಳಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದಂತಹ ಭೀಮಾ ನಾಯ್ಕ್ ರವರು ಇಂದು ಕೆ.ಎಂ.ಎಫ್ ಮಂಡಳಿಗೆ ಅವಿರೋಧವಾಗಿ ಅಯ್ಕೆ ಯಾಗಿದ್ದಾರೆ.ನಂತರ ಮಾತಾನಾಡಿದ ಕೆ.ಎನ್.ರಾಜಣ್ಣ ನವರು ನೂತನ ಅಧ್ಯಕ್ಷರಿಗೆ ಅಭಿನಂದನೆ ತಿಳಿಸಿ ಕೆ.ಎಂ.ಎಫ್ ನಲ್ಲಿರುವ ಮಂದಿನದಿನಗಳಲ್ಲಿ ಯಾರ ಜೊತೆಯೂ ವಿಲೀನ ವಾಗುವ ಪ್ರಶ್ನಯೇ ಇಲ್ಲ ಜೊತೆಗೆ ಹೇಳುವವನ್ನು ಹುಚ್ಚ ಎಂದು ಖಡಕ್ಕಾಗಿ ಸ್ಪಷ್ಟನೆ ನೀಡಿದ್ದಾರೆ.ಇನ್ನೂ ಈ ಕೆ.ಎಂ.ಎಫ್ ಸಂಸ್ಥೆಯು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಿರಿಯರು ನಾಯಕರು ಬೆಳಸಿ ರುವಂತಹ ದೊಡ್ಡ ಸಂಸ್ಥೆ ಇದಾಗಿದೆ, ಮುಂದಿನ ದಿನಗಳಲ್ಲಿ ರೈತರಗೂ ಅನುಕೂಲವಾಗುವಂತೆ ಮತ್ತು ಗ್ರಹಕರಿಗೂ ಅನುಕೂಲವಾಗುವಂತೆ ಕೆಲಸ ಮಾಡುತ್ತೇವೆ ಅಂತಾ ಹಢಳುತ್ತಲ್ಲೇ, ಮುಂದಿನ ದಿನಗಳಲ್ಲಿ ಸಹಕಾರ ಸಚಿವರ ಮಾರ್ಗದರ್ಶನದಲ್ಲಿ 5 ರೂಪಾಯಿ ಹೆಚ್ಚು ಮಾಡುವ ವಿಷಯವನ್ನು ಮುಖ್ಯಮಂತ್ರಿ ಮುಂದೆ ವಿಚಾರವನ್ನು ಇನ್ನೆರಡು ಮೂರು ದಿನಗಳಲ್ಲಿ ಸಭೆ ಮಾಡಿ ಈ ವಿಚಾರವನ್ನು ಪ್ರಸ್ಥಪಿಸುತ್ತೇವೆ ಎಂದು ನೂತನ ಅಧ್ಯಕ್ಷರಾಗಿರುವ ಭೀಮಾ ನಾಯ್ಕ್ ರವರು ಸ್ಪಷ್ಟವಾಗಿ ತಿಳಿಸಿದ್ದಾರೆ.