ಈ ವಿಡಿಯೋದಲ್ಲಿ ಹುಲಿಯೊಂದು ಮರ ಏರುತ್ತಿರುವ ದೃಶ್ಯವಿದೆ. ಅದೇ ಮರದ ಮೇಲೆ ಮಂಗವೊಂದು ಆರಾಮವಾಗಿ ಕುಳಿತಿದೆ. ಹುಲಿ ಮರ ಹತ್ತುತ್ತಿದ್ದರೂ ಮಂಗ ವಿಶ್ರಾಂತಿ ಪಡೆಯುತ್ತಿದೆ. ಜೊತೆಗೆ ಮಂಗನ ಮಡಿಲಲ್ಲಿ ಅದರ ಮರಿ ಕೂಡ ನಿದ್ರಿಸುತ್ತಾ ಇದೆ. ಕೋತಿಗೆ ತನ್ನದೇ ಆದ ಯೋಚನೆಯಲ್ಲಿ ಮುಳುಗಿದೆ. ತದನಂತರ ಹುಲಿಯು ಮರವನ್ನು ಏರುವುದನ್ನು ಕೋತಿ ನೋಡುತ್ತದೆ. ಆದರೂ ಯಾವ ರೀತಿಯಾಗಿ ಪ್ಲ್ಯಾನ್ ಮಾಡುತ್ತೆ ಗೊತ್ತಾ? ಮರವನ್ನು ಹತ್ತಿದ ನಂತರ, ಹುಲಿ ಕೋತಿಯ ಹತ್ತಿರ ಹೋಗಲು ಪ್ರಯತ್ನಿಸುತ್ತದೆ. ಕೋತಿಯು ಅದನ್ನು ತನ್ನ ಬಳಿಗೆ ಬರಲು ಬಿಡುತ್ತದೆ ಮತ್ತು ಮರದ ಕೊಂಬೆಯನ್ನು ಅಲುಗಾಡಿಸಲು ಪ್ರಾರಂಭಿಸುತ್ತದೆ. ಆಗ ಹುಲಿ ಕೊಂಬೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಪ್ರಯತ್ನಿಸುತ್ತದೆ. ಆದರೆ ಕೋತಿ ಹಿಂದೆ ಸರಿಯುವುದಿಲ್ಲ, ಹುಲಿ ಕೋತಿಯ ಮೇಲೆ ಧಾವಿಸಲು ಸಿದ್ಧವಾಗಿದೆ. ಅಷ್ಟು ಹತ್ತಿರ ಹುಲಿ ಬಂದರೂ ಕೂಡ ಕಿಂಚಿತ್ತು ಕೋತಿ ಭಯ ಪಡದೇ ಯಾವ ರೀತಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಅಂತ ನಾವೇ ವಿಡಿಯೋದಲ್ಲಿ ನೋಡಬಹುದು. ಹುಲಿಯನ್ನು ಮರದ ಕೊಂಬೆ ತುದಿಯ ತನಕ ಕರೆಸುತ್ತದೆ ಕೋತಿ. ತದನಂತರ ಯಾವ ರೀತಿಯಾಗಿ ಪ್ಲ್ಯಾನ್ ಮಾಡುತ್ತೆ ಅಂದರೆ ವಾಹ್ ಅನಿಸುತ್ತೆ. ಹುಲಿ ಮರದ ಕೊಂಬೆಗಳಲ್ಲಿ ಸಿಲುಕಿ ನೆಲಕ್ಕೆ ಬೀಳುತ್ತದೆ. ಇಲ್ಲಿ ಕೋತಿಯ ಬುದ್ದಿವಂತೆ ಮೆಚ್ಚುವಂತದ್ದೇ.