ವಿದ್ಯುತ್ ತಂತಿ ತಗುಲಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ನಡೆದಿದೆ. ತಂದೆ ಮಲ್ಲಿಕಾರ್ಜುನ ಪೂಜಾರಿ, ಮಗ ಪ್ರೀತಮ್ ಮೃತ ರ್ದುದೈವಿಗಳು.
ಪ್ರೀತಮ್ನನ್ನು ತಂದೆ ಮಲ್ಲಿಕಾರ್ಜುನ ತೋಟಕ್ಕೆ ಕರೆದುಕೊಂಡು ಹೋಗಿದ್ದ. ಈ ವೇಳೆ ಮೋಟಾರ್ ಆನ್ ಮಾಡಿ ವಾಟರ್ವಾಲ್ ಟರ್ನ್ ಮಾಡುವಾಗ ಮಲ್ಲಿಕಾರ್ಜುನ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ನೋಡಿದ ಮಗ, ತಂದೆಯನ್ನು ರಕ್ಷಿಸಲು ಕೈ ಹಿಡಿದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.