Publish Date: Mon, 06 Aug 2018 (20:30 IST)
Updated Date: Mon, 06 Aug 2018 (20:34 IST)
ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೂ ಸಹ ಬೆದರಿಕೆಗಳು ತಪ್ಪುತ್ತಿಲ್ಲ.
ರಾಷ್ಟ್ರಪತಿಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ತ್ರಿಶೂರ್ ನ ಭಗವತಿ ಕ್ಷೇತ್ರದ ಅರ್ಚಕ ಜಯರಾಮ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ತಿರುವನಂತಪೂರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಬರಬೇಕಿತ್ತು. ಹೀಗಾಗಿ ಅಲ್ಲಿನ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಆರೋಪಿಯು ರಾಷ್ಟ್ರಪತಿಗಳಿಗೆ ಬೆದರಿಕೆಯನ್ನು ಒಡ್ಡಿದ್ದನು.
ಜಾಡು ಹಿಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.