Publish Date: Tue, 11 Feb 2020 (20:30 IST)
Updated Date: Tue, 11 Feb 2020 (20:31 IST)
ತನ್ನೊಂದಿಗೆ ಅನೈತಿಕವಾಗಿ ಸಂಬಂಧ ಹೊಂದಿದ್ದ ಮಹಿಳೆಯನ್ನು ಪ್ರಿಯಕರನೇ ಕೊಲೆ ಮಾಡಿರೋ ಘಟನೆ ನಡೆದಿದೆ.
ತನ್ನೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಮಹಿಳೆ ಲಕ್ಷ್ಮೀಯನ್ನು ಕೊಲೆ ಮಾಡಿದ್ದಲ್ಲದೇ ಆಕೆಯ ಗಂಡ ಶಿವು ಹಾಗೂ ಮಗುವಿಗೆ, ಆರೋಪಿ ಪ್ರಿಯಕರ ರಂಗಧಾಮಯ್ಯ ಚಾಕುವಿನಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ.
ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ದ ಲಕ್ಷ್ಮೀ ಜೊತೆಗೆ ಆರೋ ಪಿ ರಂಗಧಾಮಯ್ಯ ಅಫೇರ್ ಇಟ್ಟುಕೊಂಡಿದ್ದನು. ಆಕೆಯೊಂದಿಗೆ ಮನಸ್ತಾಪ ಉಂಟಾಗಿದ್ದರಿಂದ ಈ ಕೃತ್ಯ ನಡೆಸಿರಬಹುದು ಅಂತ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪೀಣ್ಯ ಎರಡನೇ ಹಂತದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.