Publish Date: Thu, 09 Dec 2021 (19:59 IST)
Updated Date: Thu, 09 Dec 2021 (20:04 IST)
ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಮನೆಯವರಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪ್ರೇಮಿಗಳು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಯಲಬುರ್ಗಾ ನಿವಾಸಿಗಳಾದ ವಿದ್ಯಾಶ್ರೀ ಮತ್ತು ಪ್ರಶಾಂತ್ ಕಟ್ಟಿಮನಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು. ಇವರ ಮದುವೆ 2013ರಲ್ಲಿಯೇ ನಡೆದಿದೆ. ಮದುವೆಗೆ ಮೊದಲಿನಿಂದಲೂ ಯುವತಿಯ ಕುಟುಂಬ ವಿರೋಧ ವ್ಯಕ್ತಪಡಿಸುತ್ತಿತ್ತು. ಯುವಕ ಪ್ರಶಾಂತ ಪರಿಶಿಷ್ಟ ಜಾತಿಯವ, ಯುವತಿ ವಿದ್ಯಾಶ್ರೀ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾಗ ಪ್ರಶಾಂತ್ ಜೊತೆ ವಿದ್ಯಾಶ್ರೀ ಅವರ ಮದುವೆಯಾಗಿತ್ತು. ಮದುವೆಗೆ ಕಳೆದ 8 ವರ್ಷದಿಂದ ಮನೆಯವರನ್ನು ಒಪ್ಪಿಸಲು ವಿದ್ಯಾಶ್ರೀ ಯತ್ನಿಸುತ್ತಿದ್ದರು. ಮನೆಯವರನ್ನು ಒಪ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ಪ್ರೀತಿಸಿದ ಯುವಕನ ಮನೆಗೆ ಯುವತಿ ಬಂದಿದ್ದಾಳೆ.