ಬೆಂಗಳೂರು : ಐದು ವರ್ಷದ ಮಗ ಹಾಗೂ ಪತಿಯನ್ನು ತೊರೆದು ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಮನೆಯಿಂದ ನಾಪತ್ತೆಯಾಗಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲಿನಿ ನಾಪತ್ತಿಯಾಗಿರುವ ಮಹಿಳೆಯಾಗಿದ್ದು ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶನಿವಾರ ಮುಂಜಾನೆ ಮನೆಯಿಂದ ಹಾಲು ತರಲು ಹೊರ ಹೊರಟಿದ್ದ ಶಾಲಿನಿ ತಾಸುಗಟ್ಟಲೆ ಕಳೆದರೂ ಮನೆಗೆ ವಾಪಸಾಗಿರಲಿಲ್ಲ. ಆತಂಕಗೊಂಡ ಮನೆಯವರು ಎಲ್ಲೆಡೆ ಹುಡುಕಾಡಿದ್ದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ.
ಮನೆಯ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆಕೆ ಬಿಎಂಟಿಸಿ ಬಸ್ ಹತ್ತಿರುವುದು ಕಂಡುಬಂದಿತ್ತು. ಹೀಗಾಗಿ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಸ್ಯಾಟ್ ಲೈಟ್ ಬಸ್ ಸ್ಟಾಂಡ್ ಸೇರಿದಂ ಎಲ್ಲೆಡೆ ಆಕೆಯ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.
ಕೊನೆಗೂ ಆಕೆಯ ಸುಳಿವು ಸಿಗದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ತಾವರೆಕೆರೆ ಠಾಣೆಯ ಪೊಲೀಸುರ ಪತ್ತೆಕಾರ್ಯ ಪ್ರಾರಂಭಿಸಿದ್ದಾರೆ.