Publish Date: Wed, 14 Jun 2023 (17:37 IST)
Updated Date: Wed, 14 Jun 2023 (19:40 IST)
ರೈಲು ಹಳಿಯ ಮೇಲೆ ಏಕಾಏಕಿ ಬೃಹತ್ ಬಂಡೆ ಉರುಳಿ ಬಿದ್ದಿರುವ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿ ನಡೆದಿದೆ. ಗುಡ್ಡದಿಂದ ಬಂಡೆ ಬಿದ್ದಿರುವುದನ್ನ ಗಮನಿಸಿ ಎಚ್ಚೆತ್ತ ಚಾಲಕ, ಮರಗುತ್ತಿ ಸುರಂಗ ಮಾರ್ಗದಲ್ಲೇ ರೈಲು ನಿಲ್ಲಿಸಿ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ರೈಲ್ವೇ ಸಿಬ್ಬಂದಿ ಸತತ ಕಾರ್ಯಾಚರಣೆ ಮಾಡಿ 2 ಗಂಟೆಗಳ ಬಳಿಕ ಬಂಡೆಯನ್ನ ತೆರವುಗೊಳಿಸಿದ್ದಾರೆ. ಸದ್ಯ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದು, ಯಾವುದೇ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಿದ ಚಾಲಕರಿಗೆ ಪ್ರಶಂಸೆ ತಿಳಿಸಿದ್ದಾರೆ.