ರಬ್ಬರ್ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ಒಂದೇ ಕಡೆ 6 ಹೆಬ್ಬಾವುಗಳು ಪತ್ತೆಯಾಗಿವೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ-ಪಂಜ ರಸ್ತೆಯ ಕೂಟೇಲು ಎಂಬಲ್ಲಿ ನಡೆದಿದೆ.
ಪಂಜ - ಕಡಬ ರಸ್ತೆಯ ಕೂಟೇಲು ಬಳಿಯ ರಬ್ಬರ್ ತೋಟದಲ್ಲಿ ಒಂದೇ ಕಡೆ ಬೃಹತ್ ಗಾತ್ರದ ಆರು ಹೆಬ್ಬಾವುಗಳು ಇರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು.
ಕೂಡಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿ, ಹಾವು ಹಿಡಿಯುವವರನ್ನು ಸಂಪರ್ಕಿಸಿದ್ರು. ಸ್ಥಳಕ್ಕಾಗಮಿಸಿದ ಪಾಂಡಿಗದ್ದೆ ತಿಮ್ಮಪ್ಪ ಹಾಗೂ ರಿಕ್ಷಾ ಚಾಲಕ ಅವಿನಾಶ್ ಎಂಬುವವರು ಆರು ಹೆಬ್ಬಾವುಗಳನ್ನು ಒಂದೊಂದಾಗಿ ಹಿಡಿದು ಗೋಣಿ ಚೀಲದೊಳಕ್ಕೆ ತುಂಬಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದರು.
ಅರಣ್ಯ ಇಲಾಖೆಯ ತಂಡ ಹೆಬ್ಬಾವುಗಳನ್ನು ಕಾಡಿಗೆ ಹೋಗಿ ಬಿಟ್ಟರು.