Publish Date: Fri, 12 Aug 2022 (19:43 IST)
Updated Date: Fri, 12 Aug 2022 (19:45 IST)
ಗುಜರಾತ್ನ ಜಾಮ್‌ನಗರದ ಹೋಟೆಲ್‌ವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಐದು ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿತು. ಹೋಟೆಲ್‌ನಲ್ಲಿ ಹಲವರಿಗೆ ಸುಟ್ಟು ಗಾಯಾಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂರ್ಟ್ನಿಂದಾಗಿ ಅಲೆಂಟೊ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇದ್ದಕ್ಕಿದ್ದಂತೆ ದೈತ್ಯಾಕಾರದ ರೂಪವನ್ನು ಪಡೆದುಕೊಂಡಿತು. ಹೋಟೆಲ್ ಒಟ್ಟು ಐದು ಮಹಡಿಗಳನ್ನು ಹೊಂದಿದ್ದು, ಐದು ಮಹಡಿಗಳು ಸುಟ್ಟು ಹೋಗಿವೆ. ಘಟನೆ ಕುರಿತು ಮಾಹಿತಿ ಪಡೆದ ನಂತರ ಜಿಲ್ಲಾಧಿಕಾರಿ, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದವು.