ಕಲಬುರಗಿ : ಇನ್ಮುಂದೆ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ತಲ್ವಾರ್ ಇಡಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಕಾಣೋ ರೀತಿಯಲ್ಲಿ ಇಡಬೇಕು.
ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡ್ಬೇಕು ಎಂದು ಕರೆ ನೀಡಿದ್ದಾರೆ.
ಪೊಲೀಸರು ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡ್ತಾರೆ ಹೊರತು ಎಫ್ಐಆರ್ಗೆ ಪೂಜೆ ಮಾಡಲ್ಲ. ಮನೆಯಲ್ಲಿ ಒಂದು ತಲ್ವಾರ್ ಇಡೋದು ಅಪರಾಧವಲ್ಲ. ಪೊಲೀಸರು ಬಂದು ಕೇಸ್ ಹಾಕ್ತೀವಿ ಅಂತಾ ಹೆದರಿಸಿದ್ರೆ, ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತಾ ಹೇಳಿ ಎಂದಿದ್ದಾರೆ.