ಹೊನಲು ಬೆಳಕಿನ ಎಪಿಎಲ್ ಕ್ರಿಕೆಟ್ ನ ಎರಡನೇ ಆವೃತ್ತಿಗೆ ಚಾಲನೆ ನೀಡಲಾಗಿದೆ.
ಅಸ್ತ್ರ ಪ್ರೀಮಿಯರ್ ಲೀಗ್ (ಎಪಿಎಲ್) ಹೊನಲು ಬೆಳಕಿನ ಎರಡನೇ ಆವೃತ್ತಿಯ ಕ್ರಿಕೆಟ್ ಟೂರ್ನಿಗೆ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಹುಬ್ಬಳ್ಳಿ - ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದರು.
ಇನ್ನೂ ಇಲ್ಲಿನ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಗೂಗ್ಲಿ ಪೊಳಲಿ ಟೈಗರ್ಸ್, ಅಭಯ ಕ್ರಿಕೆಟರ್ಸ್, ಟೀಮ್ ಎಂಪೈರ್, ಮೈಟ್ ರೈಡರ್, ಉಡುಪಿ ಹಾಸ್ಪೆಟಲಿಟಿ ಸರ್ವಿಸಸ್, ಧಾರವಾಡದ ಎಸ್ಕೆಪಿ ಟೈಟನ್ಸ್ ಮತ್ತು ಸುಗ್ಗಿ ಸೂಪರ್ಸ್ಟಾರ್ಸ್ ತಂಡಗಳು ಭಾಗವಹಿಸಲಿವೆ. ಪ್ರತಿ ಪಂದ್ಯ ತಲಾ ಹತ್ತು ಓವರ್ಗಳದ್ದಾಗಿದೆ.
ಇನ್ನೂ ಚಾಂಪಿಯನ್ ತಂಡಕ್ಕೆ 2.5 ಲಕ್ಷ ರೂ. ಮತ್ತು ರನ್ನರ್ಸ್ ಅಪ್ 1.25 ಲಕ್ಷ ರೂ. ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ. ಮೊದಲ ದಿನ ಎಂಟು ಮತ್ತು ಎರಡನೇ ದಿನ ಏಳು ಪಂದ್ಯಗಳು ಜರುಗಲಿವೆ.
ಹುಬ್ಬಳ್ಳಿ ಹೋಟೆಲ್ ಸಂಘದ ಅಧ್ಯಕ್ಷ ಸುಕುಮಾರ ಶೆಟ್ಟಿ, ಸುಧೀರ್ ಶೆಟ್ಟಿ, ವೀರೇಂದ್ರ ಶೆಟ್ಟಿ, ದಿನೇಶ್ ಶೆಟ್ಟಿ, ಪುರಂದರ ಶೆಟ್ಟಿ, ಶಿವಪ್ರಸಾದ ಶೆಟ್ಟಿ ಇದ್ದರು.