Publish Date: Sun, 28 Jun 2020 (18:58 IST)
Updated Date: Sun, 28 Jun 2020 (19:00 IST)
ಮದ್ಯದ ನಶೆಯಲ್ಲಿ ಕಲಬುರಗಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮರವೊಂದರಲ್ಲಿ ಹೆಣದಂತೆ ವ್ಯಕ್ತಿಯೊಬ್ಬ ಮಲಗಿದ್ದನು.
ಇದನ್ನು ನೋಡಿದ ಜನರು ಮರದ ಮೇಲೆ ಶವ ಇರಬೇಕು ಅಂತ ತಿಳಿದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಶವದ ಥರ ಮಲಗಿದ್ದ ವ್ಯಕ್ತಿಯನ್ನು ನೋಡಿದ್ದಾರೆ. ಆ ಬಳಿಕ ನಶೆಯ ಗುಂಗಲ್ಲಿ ವ್ಯಕ್ತಿ ಮರದ ಮೇಲೆ ಮಲಗಿರುವ ವಿಷಯ ತಿಳಿದು ಬಂತು. ಆ ಬಳಿಕ ಪೊಲೀಸರು ಕಷ್ಟಪಟ್ಟು ಕುಡುಕನನ್ನು ಮರದಿಂದ ಕೆಳಗೆ ಇಳಿಸಿದರು.