Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನಲ್ಲಿ ನಡೆಯಿತು ಮಾರಣಾಂತಿಕ ಹಲ್ಲೆ-ಜೀವ ಉಳಿಸಲು ಬೇಡಿಕೊಂಡ್ರೂ ಯಾರು ಬರಲಿಲ್ಲ

ಬೆಂಗಳೂರಿನಲ್ಲಿ ನಡೆಯಿತು ಮಾರಣಾಂತಿಕ ಹಲ್ಲೆ-ಜೀವ ಉಳಿಸಲು ಬೇಡಿಕೊಂಡ್ರೂ ಯಾರು ಬರಲಿಲ್ಲ
bangalore , ಶುಕ್ರವಾರ, 11 ನವೆಂಬರ್ 2022 (14:21 IST)
ರಾಜಧಾನಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ ಹಲ್ಲೆಗೆ ಕಾರಣವಾದ್ರೂ ಏನು?ಯಾಕಾಗಿ ಮಾರಣಾಂತಿಕ ಹಲ್ಲೆ ನಡೆಯಿತು ಎಂಬುದೇ ರೋಚಕ.ಕೇವಲ ಗುರಾಯಿಸಿದಕ್ಕೆ ಜೀವವನ್ನೇ ತೆಗೆಯಲು ಗುಂಪು ಮುಂದಾಗಿತ್ತು.ಕ್ಷುಲಕ ಕಾರಣಕ್ಕೆ ಲಾಂಗು ,  ಮಚ್ಚಿನಿಂದ ಭೀಕರ ಹಲ್ಲೆ ಮಾಡಿದ್ದಾರೆ.ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ರಸ್ತೆಯಲ್ಲಿ ಬಿದ್ದವ ಒಂದು ಗಂಟೆಯಿಂದ ರಕ್ಷಣೆಗೆ ಬೇಡಿಕೆಕೊಂಡ್ರು ಯಾರು ಬರಲಿಲ್ಲ.ಹತ್ತಾರು ಕರೆಗಳನ್ನ ಮಾಡಿದ್ರೂ  ಆ್ಯಂಬುಲೆನ್ಸ್ ಕೂಡ ಬರಲಿಲ್ಲ.
 
ಮೂರು ಜನ ಯುವಕರಿಂದ ಭೀಕರ ಹಲ್ಲೆ ನಡೆದಿದ್ದು,ಮಶ್ರೂಮ್ ಸಪ್ಲೈ ಮಾಡುತ್ತಿದ್ದ ಸಂದೀಪ್ ಎಂಬಾತನ ಮೇಲೆ ಗಂಭೀರ ಹಲ್ಲೆಯಾಗಿದೆ.ಗುರಾಯಿಸಿದಕ್ಕೆ ಜೀವವನ್ನೇ ಆರೋಪಿಗಳು ತೆಗೆಯಲು ಮುಂದಾಗಿದ್ದಾರೆ.ಯೇಸುದಾಸ್@ ಕ್ರಿಶ್ ಹಾಗೂ ಮನೋಜ್ ಎಂಬುವವರಿಂದ ಹಲ್ಲೆಯಾಗಿದ್ದು ,ಕಾಲು ಕಟ್ ಮಾಡಿ , ತಲೆ ಭಾಗಕ್ಕೆ ಸೇರಿ ಮುಖಾ ಮೂತಿ ನೋಡದೆ ಲಾಂಗು ಮಚ್ಚಿನಿಂದ  ದುಷ್ಕರ್ಮಿಗಳು ಕೊಚ್ಚಿದ್ದಾರೆ‌.ಗೆಳೆಯ ಜೊತೆ ಮಾತನಾಡುತ್ತಾ ನಿಂತಿದ್ದಾಗ ಏಕಾಏಕಿ ಮೋಪೈಡ್ ನಲ್ಲಿ ಬಂದು ಹಲ್ಲೆ ಮಾಡಿದ್ದಾರೆ.
 
ಎಸ್ ಎಲ್ ವಿ ಪಾರ್ಟಿ ಹಾಲ್ ಬಳಿ ಈ  ಘಟನೆ ನಡೆದಿದೆ.ಪ್ರಾಣ ಭಿಕ್ಷೆ ಕೇಳಿದ್ದವನನ್ನ ಕೊನೆಗೂ ಆಟೋದಲ್ಲಿ ಸಂದೀಪ್ ತಮ್ಮ ಕೊಂಡೊಯ್ದಿದಾನೆ.ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದವನನ್ನ ಎತ್ತಿ ಆಸ್ಪತ್ರೆಗೆ ಸೇರಿಸೋದಕ್ಕೂ ಸಾಧ್ಯವಾಗಿರಲಿಲ್ಲ ಆಷ್ಟರ ಮಟ್ಟಿಗೆ ಕಾಲಿಗೆ ಲಾಂಗ್ ನಿಂದ ಹೊಡೆದಿದ್ದು, ಕಾಲು ಕೂಡ ನೇತಾಡುತ್ತಿತ್ತು .ಸದ್ಯ ಈ ಸಂಬಂಧ ಸಂದೀಪ್ ಸಹೋದರ ಸಾಗರ್ ನಿಂದ ಪೊಲೀಸರಿಗೆ ದೂರು ನೀಡಲಾಗಿದೆ.ಸಂದೀಪ್ ಗಂಭೀರ ಸ್ಥಿತಿಯಲ್ಲಿದ್ದಾನೆ.ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಜೈಕಾರ