ರಾಯ್ಪುರ : ದೇವರ ಮೇಲೆ ನಂಬಿಕೆ, ಭಕ್ತಿ ಇರಬೇಕು. ಆದರೆ ಅತಿಯಾದ ನಂಬಿಕೆ ಒಳ್ಳೆಯದಲ್ಲ ಎಂಬುದಕ್ಕೆ ಛತ್ತೀಸಘಡದ ರಾಜಾನಂದ್‍ಗಾವ್ ಜಿಲ್ಲೆಯಲ್ಲಿ ನಡೆದ ಘಟನೆಯೇ ಒಂದು ನಿದರ್ಶನ.
5 ತಿಂಗಳ ಮಗುವಿನ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಹಾವಾಡಿಗ ಸಲಹೆಯಂತೆ ನಾಗ ಪೂಜೆ ಮಾಡಿ ಆಶೀರ್ವಾದ ಪಡೆಯಲು ಹಾವಿನ ಬಳಿ ಮಗುವಿಟ್ಟು ಮಗುವಿನ ಜೀವವನ್ನೆ ತೆಗೆದಿದ್ದಾರೆ.
ಹೌದು. ಹಾವಾಡಿಗನ ಮಾತು ಕೇಳಿ ದಂಪತಿಗಳು 5 ತಿಂಗಳ ಕಂದಮ್ಮನನ್ನು ನಾಗರಹಾವಿನ ತಲೆ ಬಳಿ ಇಟ್ಟಿದ್ದಾರೆ. ಮಗುವನ್ನು ನೋಡಿದ ಕೂಡಲೇ ನಾಗರಹಾವು ಕಚ್ಚಿದೆ. ಇದರಿಂದ ಗಾಭರಿಗೊಂಡ ಪೋಷಕರು ಹಾವಾಡಿಗನ ಬಳಿ ವಿಚಾರಿಸಿದಾಗ, ಇದು ಹಲ್ಲುಕಿತ್ತ ಹಾವು. ಮಗುವಿಗೆ ಏನು ತೊಂದರೆಯಾಗುವುದಿಲ್ಲವೆಂದು ಹೇಳಿ ಸಮಾಧಾನ ಮಾಡಿದ್ದಾನೆ.
ಆದರೆ ನಂತರ ಮಗುವಿನ ಉಸಿರಾಟದಲ್ಲಿ ಏರುಪೇರಾಗಿದ್ದ ಕಾರಣ ಕೂಡಲೇ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮಗು ಕಳೆದುಕೊಂಡ ಸಿಟ್ಟಿನಿಂದ ಪೋಷಕರು ಹಾವಡಿಗನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.