Publish Date: Sun, 20 Mar 2022 (19:05 IST)
Updated Date: Sun, 20 Mar 2022 (19:12 IST)
ಯುನೈಟೆಡ್ FC ನೆಲ್ಲಿಕಟ್ಟು ಮತ್ತು ರಾಯಲ್ ಟ್ರಾವೆಲ್ಸ್ FC ಕೋಯಿಕ್ಕೋಡ್ ನಡುವೆ ನಡೆಯುತ್ತಿದ್ದ ಸೆವೆನ್ಸ್ ಫುಟ್ಬಾಲ್ ಪಂದ್ಯದ ಸಮಯದಲ್ಲಿ ತಾತ್ಕಾಲಿಕವಾಗಿ ಕಟ್ಟಿದ ಗ್ಯಾಲರಿ ಕುಸಿದು ಬಿದ್ದಿದ್ದೆ. ಕೇರಳದ ಮಲಪ್ಪುರಂ ಜಿಲ್ಲೆಯ ಪೂಂಗೂಡೆ ಎಂಬಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯ. ಹಠಾತ್ತಾಗಿ ಗ್ಯಾಲರಿ ಕುಸಿದು ಬಿದ್ದ ರಭಸಕ್ಕೆ 200 ಜನರಿಗೆ ಗಾಯವಾಗಿದ್ದು ಅದರಲ್ಲಿ 5 ಮಂದಿಗೆ ತೀವ್ರ ಗಾಯವಾಗಿದ್ದು ಕೆಲವರು ಕೈಮುರಿದುಕೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ವಂಡೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9:30ರ ವೇಳೆಗೆ ಗ್ಯಾಲರಿ ಕುಸಿದಿದೆ, ಬೇಸಿಗೆ ತುಂತುರು ಮಳೆಯಾಗುತ್ತಿದ್ದು ಇದರಿಂದ ಕುಸಿತವಾಗಿರಬಹುದು.