Select Your Language

Notifications

webdunia
webdunia
webdunia
webdunia

ಕೆಲಸ‌ ಮಾಡುತ್ತಿದ್ದ ವೇಳೆ ಮ್ಯಾನ್ ಹೋಲ್ ಗೆ ಬಿದ್ದ ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ

A BBMP sanitation worker fell into a manhole while working
20 ಅಡಿ ಅಳದ ರಾಜಕಾಲುವೆಗೆ  ಸ್ವಚ್ಚತಾ ಸಿಬ್ಬಂದಿ ಬಿದ್ದು ಬೆನ್ನುಮುಳೆ ಮುರಿದಿದೆ.ನಂದಿನಿ ಲೇಜೌಟ್ ನ ಶ್ರೀಕಂಠ ನಗರದಲ್ಲಿ ಘಟನೆ ನಡೆದಿದೆ.ಮೇ 27ರಂದು ಸ್ವಚ್ಚತಾ ಕೆಲಸ ಮಾಡ್ತಿದ್ದ ಸಿಬ್ಬಂದಿ ರತ್ನಮ್ಮ ರಾಜಕಾಲುವೆ ಮೋರಿ ಮೇಲೆ ಹಾಕಿದ್ದ ಕಸ ತೆಗೆಯುತ್ತಿದ್ದರು.ಕಸದ ಕೆಳಗೆ ದೊಡ್ಡ ಮ್ಯಾನ್ ಹೋಲ್ ಇರುವ ಅರಿವಿಲ್ಲದೆ ಸೀದಾ ಮೋರಿಗೆ ಬಿದ್ದಿದ್ದಾರೆ.ಬಳಿಕ‌ ಜೊತೆಯಿದ್ದ ಇನ್ನೊಬ್ಬ ಸಿಬ್ಬಂದಿ ಸ್ಥಳೀಯರನ್ನ‌ ಕರೆದಿದ್ದಾರೆ.
 
ಏಣಿ ಮೂಲಕ 20 ಅಡಿ ಅಳದ ಮೋರಿಯಲ್ಲಿ ಬಿದ್ದಿದ್ದ ರತ್ನಮ್ಮರ ರಕ್ಷಣೆ ಮಾಡಲಾಗಿದೆ.ಸದ್ಯ ಬೆನ್ನು ಮೊಳೆ ಮುರಿದು ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ವರ್ಷಗಳ ಹಿಂದೆ ನೀರು‌ ಹೋಗಲು ದೊಡ್ಡ ರಾಜಕಾಲುವೆ ಮೋರಿ‌ ನಿರ್ಮಾಣವಾಗಿದ್ದು,ದೊಡ್ಡ ಮೋರಿ ನಿರ್ಮಾಣ ಮಾಡಿ ಮ್ಯಾನ್ ಹೋಲ್ ಮುಚ್ಚದೆ ಹಾಗೇ ಬಿಟ್ಟಿದ್ದರು.ಸುತ್ತಮುತ್ತ ಸಾಕಷ್ಟು ಮನೆಯಿದೆ. ಒಂದು ವೇಳೆ ಮಕ್ಕಳು ಬಿದ್ದಿದ್ರೆ ಏನೂ ಕತೆ ಅಂತ ಸ್ಥಳೀಯರು ಆಕ್ರೋಶ  ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಮೊಟ್ಟೆ ಬೆಲೆ