Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾಹುಕಾರ್​​ ಆಸ್ತಿ 72.25 ಕೋಟಿ ರೂ. ಕುಸಿತ

ಸಾಹುಕಾರ್​​ ಆಸ್ತಿ 72.25 ಕೋಟಿ ರೂ. ಕುಸಿತ
ಬೆಳಗಾವಿ , ಶನಿವಾರ, 22 ಏಪ್ರಿಲ್ 2023 (17:15 IST)
ಬೆಳಗಾವಿ ಜಿಲ್ಲೆಯ ಗೋಕಾಕ್​​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ 72.25 ಕೋಟಿ ರೂ. ಕಡಿಮೆಯಾಗಿದೆ. ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 2018ರಲ್ಲಿ122 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದ ಅವರು, ಈ ಬಾರಿ 49.25 ಕೋಟಿ ರೂ. ಆಸ್ತಿ ಹೊಂದಿದ್ದಾಗಿ ನಮೂದಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಇಳಿಕೆಗೆ ಕಾರಣ ಏನು ಎಂದು ನಮೂದಿಸಿಲ್ಲ. 2018ರಲ್ಲಿ ರಮೇಶ್​ ತಮ್ಮ ಜೊತೆಗೆ, ಪತ್ನಿ ಜಯಶ್ರೀ, ಇಬ್ಬರು ಪುತ್ರರಾದ ಅಮರನಾಥ ಹಾಗೂ ಸಂತೋಷ ಅವರ ಆಸ್ತಿ ವಿವರ ನೀಡಿದ್ದರು. ಆದರೆ, ಈ ಬಾರಿ ತಮ್ಮ, ಪತ್ನಿ ಹಾಗೂ ಒಬ್ಬ ಪುತ್ರನ ಆಸ್ತಿ ಮಾತ್ರ ಘೋಷಿಸಿದ್ದಾರೆ. ಇನ್ನೊಬ್ಬ ಪುತ್ರ ಸಂತೋಷ ಆಸ್ತಿ ವಿವರ ನೀಡಿಲ್ಲ. 2013ರ ಚುನಾವಣೆ ವೇಳೆ ಒಟ್ಟು 57 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಘೋಷಿಸಿದ ಆಸ್ತಿ ಅದಕ್ಕಿಂತಲೂ ಕಡಿಮೆ ಆಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ಸಿಎಂ ಆಗ್ಬೇಕೆಂದು ಅಭಿಮಾನಿ ಹರಕೆ