ಬೆಂಗಳೂರು - ನಗರದಲ್ಲಿ ನಂಬರ್ ಪ್ಲೇಟ್ ಬಳಸಿ ದೋಖಾ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.ನಕಲಿ ನಂಬರ್ ಪ್ಲೇಟ್ ಬಳಸಿ ಪೊಲೀಸ್ ನವರ ದಿಕ್ಕು ತಪ್ಪಿಸಿ ವಾಹನಸವಾರರು ಓಡಾಟ ನಡೆಸ್ತಿದ್ದಾರೆ.ನಗರದಲ್ಲಿ ನಕಲಿ ನಂಬರ್ ಪ್ಲೇಟ್ ಗಳ ಹಾವಳಿ ಹೆಚ್ಚಾಗಿರುವುದು ಈಗ ಬೆಳಕಿಗೆ ಬರುತ್ತಿದೆ.
2019ರ ಏ.ಒಂದರ ಮೊದಲು ಖರೀದಿಸಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶ ಬಳಿಕ 700 ಕೋಟಿ ರು.ಗಳಣಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ದೂರು ದಾಖಲಿಸಲಾಗಿದೆ. ಅಖಿಲ ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ಎನ್.ಜಿತೇಂದ್ರ ದೂರು ನೀಡಿದ್ದಾರೆ.