ಬೆಂಗಳೂರು : ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 6ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ನನ್ನ ಜತೆ ಮಾತಾಡಿದ್ರು. ಕೊರೊನಾ ಹೆಚ್ಚಾಗಿರೋದ್ರಿಂದ 6-9ನೇ ತರಗತಿ ಬಂದ್ ಮಾಡಲಾಗಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿ ಕಡ್ಡಾಯ ಇಲ್ಲ. ಒಪ್ಪಿಗೆ ಪತ್ರ ಕೊಟ್ಟು ಶಾಲೆಗೆ ಬರುತ್ತಿದ್ದಾರೆ. 15 ದಿನ ಶಾಲೆ ಸ್ಥಗಿತಗೊಳಿಸಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಹೀಗಾಗಿ ಸಚಿವರ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಸಿಡಿದೆದ್ದಿದೆ. ಶಾಲೆಯಲ್ಲಿ ಮಕ್ಕಳು ಸುರಕ್ಷಿತವಾಗಿದ್ದಾರೆ. ಮಕ್ಕಳಿಗೆ ಪರೀಕ್ಷೆ ನಡೆಸಲು ತಯಾರಿ ನಡೆಯುತ್ತಿದೆ. ಪರೀಕ್ಷೆ ಮುಗಿಸಲು ಅವಕಾಶ ಕೇಳಿದ್ರೂ ಕೊಟ್ಟಿಲ್ಲ. ಸಿಎಂ ಜೊತೆ ಚರ್ಚಿಸಿ ಅವಕಾಶ ಕೊಡಿಸಿ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.